Sudeep : ಪ್ರತಿಯೊಂದ್ರಲ್ಲೂ ತಪ್ಪು ಹುಡುಕಿದ್ರೆ ಹೇಗೆ – ಸುದೀಪ್
ಸಂದರ್ಭ ಎಂತಹದ್ದೇ ಇರಲಿ ಕೂಲಾಗಿ ನಿರ್ವಹಿಸುತ್ತಾ , ಪ್ರಶ್ನೆಗಳೆಂತಹದ್ದೇ ಇರಲಿ , ತಮ್ಮದೇ ಶೈಲಿಯಲ್ಲಿ ನಾಜೂಕಾಗಿಯೂ ನಯವಾಗಿ ನಾಟುವ ಹಾಗೆ ಉತ್ತರಿಸುವ ಚತುರ ಕಿಚ್ಚ ಸುದೀಪ್..
ಇತ್ತೀಚೆಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ರೆಕ್ಸ್ ಮಾಲ್ ನ PVR ಚಿತ್ರಮಂದಿರಲ್ಲಿ ತನ್ನ ಮೊದಲ ಡೈರೆಕ್ಟರ್ಸ್ ಕಟ್ ಎಂಬ ಆಡಿಯನ್ನು ತಯಾರಿಸಿದೆ. ಈ ಆಡಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಕಿಚ್ಚ ಸುದೀಪ್ ಪ್ರಶ್ನೆಯೊಂದಕ್ಕೆ ಖಡಕ್ ಉತ್ತರ ನೀಡಿದ್ದಾರೆ..
ಬೆಂಗಳೂರಿನಲ್ಲಿ ಡೈರೆಕ್ಟರ್ ಕಟ್ ಪಿವಿಆರ್ ಉದ್ಘಾಟನೆಯಾಗುತ್ತಿದೆ ಎನ್ನುವ ವಿಷಯಕ್ಕೆ ಖುಷಿಪಡಿ, ಅದನ್ನು ಬಿಟ್ಟು ಚಿಕ್ಕ ಪುಟ್ಟ ತಪ್ಪುಗಳನ್ನು ಹುಡುಕಬೇಡಿ, ಈಗ ತಾನೇ ಟೇಪ್ ಕಟ್ಟಿಂಗ್ ಆಗಿದೆ, ಆಗಲೇ ಇಂತಹ ತಪ್ಪುಗಳನ್ನು ಹುಡುಕಿ ಪ್ರಶ್ನಿಸುವುದು ಸರಿಯಲ್ಲ ಸಮಾಧಾನದಿಂದ ಕಾಯಿರಿ ಎಂದು ಕಿಚ್ಚ ಸುದೀಪ್ ಹೇಳಿದರು.
ಓರ್ವ ವ್ಯಕ್ತಿ ಜೊತೆ ಮಾತನಾಡುವಾಗ ಆತನ ಮುಖ ನೋಡುತ್ತಾ ಮಾತನಾಡಿ, ಇಲ್ವಾ ಪಾದ ನೋಡ್ತಾ ಮಾತನಾಡಿ, ಅದನ್ನು ಬಿಟ್ಟು ಆತ ಶರ್ಟ್ ಬಟನ್ ಹಾಕಿಲ್ಲ, ಪ್ಯಾಂಟ್ ಜಿಪ್ ಹಾಕಿಲ್ಲ ಎಂಬ ಸಣ್ಣ ತಪ್ಪುಗಳನ್ನು ಹುಡುಕಿ ಮಾತನಾಡಬೇಡಿ, ಇನ್ನೂ ಫಿನಿಷಿಂಗ್ ಅಗದ ಕಟ್ಟಡದ ಬಗ್ಗೆ ಈಗಲೇ ಕೊಂಕು ನುಡಿಯುವುದು ತಪ್ಪು ಎಂದು ಕಿಚ್ಚ ಸುದೀಪ್ ಹೇಳಿದರು.