Vasishtha – Haripriya : ಕೊನೆಗೂ ಸಿಕ್ಕಿತು ವಸಿಷ್ಠ – ಹರಿಪ್ರಿಯಾ ಎಂಗೇಜ್ ಮೆಂಟ್ ಫೋಟೋ.!!
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾ ಜೋಡಿಯ ಹಸಮಣೆ ಏರೋದು ಪಕ್ಕಾ ಆಗಿದೆ. ಅಂತೆ ಕಂತೆಗಳಿಗೆಲ್ಲ ತೆರೆ ಎಳೆಯುವಂತೆ ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಎಂಗೇಜ್ಮೆಂಟ್ ಮಾಡಿಕೊಂಡಿರುವ ಪೋಟೋ ಗಳು ಬಿಡುಗಡೆಯಾಗಿದ್ದು, ಪೋಟೋಗಳು ವೈರಲ್ ಆಗುತ್ತಿವೆ.
ಕಂಚಿನ ಕಠದ ಬಹುಮುಖ ಪ್ರತಿಭೆ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯ ಶೀಘ್ರದಲ್ಲೆ ಸಪ್ತಪದಿ ತುಳಿಯುವುದು ಪಕ್ಕಾ ಆಗಿದೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ.
ಇಬ್ಬರು ಜೋಡಿಗಳು ಸಾಂಪ್ರಾದಾಯಿಕ ಧಿರುಸು ಧರಿಸಿ ಉಂಗುರು ಬದಲಾಯಿಸಿಕೊಳ್ಳುತ್ತಿರವ ಪೋಟೋವನ್ನ ನೀವು ನೋಡಬಹುದು.
ಇದಕ್ಕೂ ಮೊದಲಿ ಇವರಿಬ್ಬರೂ ಎಂಗೇಜ್ ಆಗಿರುವ ಸುದ್ದಿಯನ್ನ ತುಂಬಾ ಕ್ರಿಯೇಟಿಯವ್ ಆಗಿ ಸೋಶೀಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.
ಹರಿಪ್ರಿಯ ಹಂಚಿಕೊಂಡಿರುವ ಪೋಟೋದಲ್ಲಿ ನರಸಿಂಹದವತಾರದ ಕೈಯಲ್ಲಿ ಮುದ್ದು ಲಕ್ಷಿ ಇರುವಂತೆ ಪೋಟೋ ಇದ್ದು ಸಿಂಹ ಕೈಯಲ್ಲಿ ಹರಿಯ ಪ್ರಿಯೆ ಇದ್ದಾಳೆ ಎನ್ನುವಂಥಹ ಅರ್ಥ ಬರುವಂತೆ ಪೊಟೋ ಹಂಚಿಕೊಂಡಿದ್ದಾರೆ.
ಈ ಪೋಟೋ ಗೆ ಚಿನ್ನ ನಿನ್ನ ತೋಳಿನಲ್ಲಿ ಕಂದಾ ನಾನು ಎಂಬ ಮುದ್ದಾದ ಕ್ಯಾಪ್ಶನ್ ನೀಡಿದ್ದಾರೆ. ವಸಿಷ್ಠ ಸಿಂಹ ಇದೇ ಪೋಟೋ ಹಂಚಿಕೊಂಡಿದ್ದು ಇವರಿಬ್ಬರ ಪ್ರೀತಿ ಖಚಿತವಾಗಿದೆ.