Akshay Kumar : ಲೈಂಗಿಕ ಶಿಕ್ಷಣದ ಕುರಿತು ಸಿನಿಮಾ
ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯೆಸ್ಟ್ ನಟ..
ವರ್ಷಕ್ಕೆ ಸುಮಾರು 5 -6 ಸಿನಿಮಾಗಳು ರಿಲೀಸ್ ಆಗುತ್ವೆ..
ಅಕ್ಷಯ್ ಕುಮಾರ್ ಸದ್ಯಕ್ಕೆ ಸಾಲು ಸಾಲು ಸೋಲನ್ನೇ ಕಂಡಿದ್ದಾರೆ..
ಅಂದ್ಹಾಗೆ ಅಕ್ಷಯ್ ಕೆಲ ಸಾಮಾಜಿಕ ಮೆಸೇಜ್ ನೀಡುವಂತಹ ಉತ್ತಮ ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ಮಾಡ್ತಾರೆ..
ಇದೀಗ ಲೈಂಗಿಕ ಶಿಕ್ಷಣದ ಕುರಿತಾದ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಜೆಡ್ಡಾದಲ್ಲಿ ನಡೆದ ರೆಡ್ ಸೀ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಈ ಬಗ್ಗೆ ಮಾತನಾಡಿರೋ ಅಕ್ಕಿ , “ನಾನು ಲೈಂಗಿಕ ಶಿಕ್ಷಣದ ಕುರಿತು ಚಲನಚಿತ್ರವನ್ನು ಮಾಡುತ್ತಿದ್ದೇನೆ. ಇದು ಬಹಳ ಮುಖ್ಯವಾದ ವಿಷಯವಾಗಿದೆ.
ಬಹಳಷ್ಟು ಕಡೆ ಅದು ಇರುವುದಿಲ್ಲ. ನಾವು ಶಾಲೆಯಲ್ಲಿ ಕಲಿಯುವ ಎಲ್ಲಾ ರೀತಿಯ ವಿಷಯಗಳನ್ನು ನಾವು ಹೊಂದಿದ್ದೇವೆ ಆದರೆ.. ಲೈಂಗಿಕತೆಯು ಒಂದು ಶಿಕ್ಷಣವಾಗಿದೆ. ಪ್ರಪಂಚದ ಎಲ್ಲಾ ಶಾಲೆಗಳು ಅದನ್ನು ಹೊಂದಬೇಕೆಂದು ನಾನು ಬಯಸುತ್ತೇನೆ ಏಕೆಂದರೆ ಅದು ಮುಖ್ಯವಾಗಿದೆ.
“ಇದು ಬಿಡುಗಡೆಗೆ ಸಮಯ ತೆಗೆದುಕೊಳ್ಳುತ್ತದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಾನು ಆ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ. ಇದು ನಾನು ಮಾಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ ”ಎಂದಿದ್ದಾರೆ..
Akshay Kumar ‘cinema on sex education’