BBK9 : ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೇಮ್ ಓವರ್..!!
ಬಿಗ್ ಬಾಸ್ ಸೀಸನ್ 9 ರಲ್ಲಿ ಒಮ್ಮೊಮ್ಮೆ ಕಾಮಿಡಿ ಮಾಡಿ ಮನೆ ಸದಸ್ಯರ ಜೊತೆಗೆ ವೀಕ್ಷಕರನ್ನೂ ನಕ್ಕು ನಗಿಸುತ್ತಾ , ಕೆಲವೊಮ್ಮೆ ಕಿರಿಕ್ ಮಾಡಿಕೊಂಡು , ಒಮ್ಮೊಮ್ಮೆ ಅಗ್ರೆಸ್ಸಿವ್ ಆಗಿ ಆಟವಾಡ್ತಿದ್ದ ಕಾವ್ಯಶ್ರೀ ಗೌಡ ಗೇಮ್ ಓವರ್ ಆಗಿದೆ..
ದೊಡ್ಮನೆಯಲ್ಲಿ ‘ಮಂಗಳಗೌರಿ’ಯ ಖೇಲ್ ಖತಮ್ ಆಗಿದೆ..
ಕಾವ್ಯಶ್ರೀ ಈ ವಾರ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ..
ಅಂದ್ಹಾಗೆ ಮಂಗಳಗೌರಿ ಧಾರವಾಹಾಹಿಯಲ್ಲಿ ಯಾವಾಗ ನೋಡು ಮೂಒತ್ತೂ ಕಣ್ಣೀರಿಡುತ್ತಿದ್ದ ಕಾವ್ಯ ಅಳುಮುಂಜಿ ಅಂತಲೇ ಫೇಮಸ್ ಆಗಿ ಟ್ರೋಲ್ ಕೂಡ ಆಗಿದ್ದರು..
ಆದ್ರೆ ಬಿಗ್ ಬಾಸ್ ಮನೆಯಲ್ಲಿ ಬೇಸರಗೊಂಡಿದ್ದು ಕಡಿಮೆ.. ಸದಾ ಲವಲವಿಕೆಯಿಂದಲೇ ಇರುತ್ತಿದ್ದರು.. ಆದ್ರೀಗ ದೊಡ್ಮನೆಯಲ್ಲಿ ಮಂಗಳಗೌರಿ ಆಟ ಮುಗಿದಿದೆ..