Hansika : ಮದುವೆ ಸಂಭ್ರಮದಲ್ಲಿ ‘ಬಿಂದಾಸ್’ ಹುಡುಗಿ ಹನ್ಸಿಕಾ..!!
ಬಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಇಂದು ಗೆಳೆಯ ಸೋಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟಿ ತನ್ನ ಕುಟುಂಬದೊಂದಿಗೆ ಜೈಪುರದ ಮುಂಡೋಟಾ ಕೋಟೆಯನ್ನು ತಲುಪಿದ್ದು, ಅಲ್ಲಿ ಮದುವೆ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಿವೆ.
ಗುರುವಾರ ಮೆಹೆಂದಿ ಕಾರ್ಯ ಶುಕ್ರವಾರ ಸೂಫಿ ನೈಟ್ ಆಯೋಜಿಸಲಾಗಿತ್ತು ಶನಿವಾರ ಅಲ್ಲಿ ಪೊಲೊ ಪಂದ್ಯ ಆಯೋಜಿಸಲಾಗಿತ್ತು.
ಶನಿವಾರ ಹನ್ಸಿಕಾ ಮತ್ತು ಸೊಹೈಲ್ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪೋಲೋ ಪಂದ್ಯ ವೀಕ್ಷಿಸಲು ತೆರಳಿದ್ದರು. ಈ ಸಮಯದಲ್ಲಿ, ದಂಪತಿಗಳು ಬಿಳಿ ಉಡುಗೆಯಲ್ಲಿ ವಿಂಟೇಜ್ ಕಾರಿನ ಮೇಲೆ ಸವಾರಿ ಮಾಡುವ ಮೂಲಕ ಪೋಲೋ ಮೈದಾನವನ್ನು ತಲುಪಿದರು. ಪೋಲೋ ಪಂದ್ಯವನ್ನು ವೀಕ್ಷಿಸಿದ ನಂತರ ಇಬ್ಬರೂ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ನೃತ್ಯಮಾಡಿದರು.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಪೋಲೊ ಪಂದ್ಯ ಆಯೋಜಿಸಲಾಗಿತ್ತು. ಈ ಸಮಯದಲ್ಲಿ, ಗುಲಾಬಿ ಮತ್ತು ಬಿಳಿ ಬಣ್ಣದ ಥೀಮ್ ಇರಿಸಲಾಗಿತ್ತು. ಈ ವೇಳೆ ಹನ್ಸಿಕಾ ಮತ್ತು ಸೊಹೈಲ್ ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.
ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಕಥುರಿಯಾ ಇಂದು ಡಿಸೆಂಬರ್ 4 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಕೇವಲ ಖಾಸಗಿ ವ್ಯಕ್ತಿಗಳಿಗಷ್ಟೆ ಆಹ್ವಾನ ನೀಡಲಾಗಿದೆ. ಮುಂಡೋಟಾ ಕೋಟೆಯಲ್ಲಿ ಮದುವೆಗೆ ಆಗಮಿಸುವ ಅತಿಥಿಗಳನ್ನು ವಿಶಿಷ್ಟ ರಾಜಸ್ಥಾನಿ ಶೈಲಿಯಲ್ಲಿ ಸ್ವಾಗತಿಸಲಾಗುತ್ತದೆ.