Kichha sudeepa – ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಕ್ಕೆ ಭೇಟಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿನಿಮಾ , ಬಿಗ್ ಬಾಸ್ ಎರೆಡರಲ್ಲೂ ಬ್ಯುಸಿಯಾಗಿ್ದಾರೆ..
ಇತ್ತೀಚೆಗೆ ಪತ್ನಿ ಪ್ರಿಯಾ ಸುದೀಪ್ ಅವರೊಂದಿಗೆ ಕಿಚ್ಚ ಸುದೀಪ್ ಅವರು ಶ್ರೀ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ..
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಂಗಳೂರಿಗೆ ತೆರಳಿದ್ದ ಸುದೀಪ್ ದಂಪತಿ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಕ್ಕೆ ತೆರಳಿ ಅಮ್ಮನ ದರ್ಶನ ಪಡೆದುಕೊಂಡಿದ್ದಾರೆ..
ಈ ವೇಳೆ ಕಟೀಲು ದೇವಸ್ಥಾನದ ವತಿಯಿಂದ ಸುದೀಪ್ ಅವರಿಗೆ ಶಾಲು ಹೊದಿಸಿ ಗೌರವಿಸಿದ್ದಾರೆ..