Kollywood : ಸಿನಿಮಾ ಶೂಟಿಂಗ್ ಸ್ಪಾಟ್ ನಲ್ಲಿ ಸ್ಟಂಟ್ ಮಾಸ್ಟರ್ ಸಾವು
ತಮಿಳಿನ ಸ್ಟಂಟ್ ಮಾಸ್ಟರ್ ಎಸ್ ಸುರೇಶ್ ಶೂಟಿಂಗ್ ಸ್ಪಾಟ್ ನಲ್ಲೇ ಸಾವನಪ್ಪಿರೋ ಘಟನೆ ಚೆನ್ನೈನಲ್ಲಿ ನಡೆದಿದೆ..
ವಂಡಲೂರು ಸಮೀಪದ ಉಣಮಂಚೇರಿಯಲ್ಲಿನ ಸೆಟ್‌ನಲ್ಲಿ ವೆಟ್ರಿಮಾರನ್ ನಿರ್ದೇಶನದ ‘ವಿಡುತಲೈ’ ಚಿತ್ರಕ್ಕಾಗಿ ಎಸ್.ಸುರೇಶ್ , ಮತ್ತೊಬ್ಬ ಸ್ಟಂಟ್ ಮಾಸ್ಟರ್‌ಗೆ ಸಹಾಯ ಮಾಡುತ್ತಿದ್ದರು..
ಶನಿವಾರ ವಂಡಲೂರು ಬಳಿಯ ಸೆಟ್‌ನಲ್ಲಿ ಚಿತ್ರವೊಂದರ ಸೀಕ್ವೆನ್ಸ್ ಪ್ರದರ್ಶಿಸುತ್ತಿದ್ದಾಗ ಹಗ್ಗ ತುಂಡಾಗಿ ಕೆಳಗೆ ಬಿದ್ದು 54 ವರ್ಷದ ಸ್ಟಂಟ್ ಮಾಸ್ಟರ್ ಸಾವನ್ನಪ್ಪಿದ್ದಾರೆ.
ಇವರು 25 ವರ್ಷಗಳಿಂದ ಸ್ಟಂಟ್ ಮಾಸ್ಟರ್ ಆಗಿದ್ದಾರೆ.
ವಂಡಲೂರು ಸಮೀಪದ ಉನಾಮಂಚೇರಿ ಗ್ರಾಮದಲ್ಲಿನ ಸೆಟ್‌ನಲ್ಲಿ ಸಿಬ್ಬಂದಿ ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.