RRR : ರಾಜಮೌಳಿಗೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಅತ್ಯತ್ತಮ ನಿರ್ದೇಶಕ ಪ್ರಶಸ್ತಿ
ಭಾರತೀಯ ಚಿತ್ರರಂಗದ ಜಕ್ಕಣ್ಣ ಎಸ್ ಎಸ್ ರಾಸಜಮೌಳಿ ನಿರ್ದೇಶನದ RRR ಸಿನಿಮಾ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ತಮ್ಮ ಛಾಪೂ ಮೂಡಿಸುತ್ತಿದೆ. ಜಪಾನ್ ಭಾಷೆಯಲ್ಲೂ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಸಿನಿಮಾ ಹಲವು ಪ್ರತಿಷ್ಟಿತ ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನ ತನ್ನದಾಗಿಸಿಕೊಳ್ಳುತ್ತಿದೆ.
OTT ಪ್ಲಾಟ್ಫಾರ್ಮ್ನಲ್ಲಿ ‘RRR’ ಬಿಡುಗಡೆಯಾದ ನಂತರ, ಪಾಶ್ಚಿಮಾತ್ಯ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಚಿತ್ರಕ್ಕೆ ವಿದೇಶಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವುದರ ಜೊತೆಗೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದುಕೊಳ್ಳುತ್ತಿದೆ. ‘RRR’ ಚಿತ್ರಕ್ಕೆ ಇತ್ತೀಚೆಗೆ ಮತ್ತೊಂದು ಗೌರವ ಸಿಕ್ಕಿದೆ.
ಅತ್ಯಂತ ಪ್ರತಿಷ್ಠಿತ ‘ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್’ ಪ್ರಶಸ್ತಿಯನ್ನ RRR ಪಾಲಾಗಿದ್ದು, ಈ ಚಿತ್ರಕ್ಕಾಗಿ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನ ಪಡೆದುಕೊಂಡಿದೆ.
ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತರು 2000 ರಿಂದ 16 ಬಾರಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದ್ದಾರೆ. ‘ಫಿಲ್ಮ್ ಕ್ರಿಟಿಕ್ಸ್ ಸರ್ಕಲ್’ ಪ್ರಶಸ್ತಿಯನ್ನು ಸುದ್ದಿ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಆನ್ಲೈನ್ ಪ್ರಕಟಣೆಗಳ ಅನೇಕ ಪ್ರಸಿದ್ಧ ವ್ಯಕ್ತಿಗಳು ಆಯೋಜಿಸಿದ್ದಾರೆ. 1935 ರಿಂದ ಚಲನಚಿತ್ರಗಳಲ್ಲಿ ಪ್ರತಿಭೆ ತೋರಿದವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.