Vedha : ರಾಯಚೂರಿನಲ್ಲಿ ವೇದ ಟೀಸರ್ ರಿಲೀಸ್,,!!
ಶಿವರಾಜ್ ಕುಮಾರ್ ಹಾಗೂ ಎ. ಹರ್ಷ ಕಾಂಬಿನೇಷನ್ ನ ಬಹುನಿರೀಕ್ಷೆಯ ವೇದ ಸಿನಿಮಾದ ಎರಡನೇ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಭಾರೀ ಗಮನ ಸೆಳದಿದೆ..
ಅಂದ್ಹಾಗೆ ಟೀಸರ್ ಅನ್ನ ರಾಯಚೂರಿನಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ.. ಇದು ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾವಾಗಿದೆ.. ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದರು..
ಈ ವೇಳೆ ಮಾತನಾಡಿದ ಅವರು , ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಈ ಭಾಗದ ಜನ ನಮಗೆ ಹೇಳಿದರೆ ನಾವು ಸ್ಪಂದಿಸುತ್ತೇವೆ. ಎಲ್ಲಾ ನಟರು ಬಂದು ನಿಲ್ಲುತ್ತೇವೆ ಎಂದು ನಟ ಶಿವ ರಾಜ್ಕುಮಾರ್ ಹೇಳಿದ್ದಾರೆ.
ಇಲ್ಲಿನ ಜನ ನಮ್ಮಲ್ಲಿಗೆ ಬಂದು ಸ್ವೀಟ್ ತಿನ್ನಿಸಿ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಸಮಸ್ಯೆ ಹೇಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ರಾಯಚೂರಿನ ಏಮ್ಸ್ ಹೋರಾಟದ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ ಎಂದರು.
ಅಂದ್ಹಾಗೆ ವೇದ ಸಿನಿಮಾ ಡಿಸೆಂಬರ್ 23 ಕ್ಕೆ ತೆರೆಗೆ ಬರಲಿದೆ.. ಟೀಸರ್ ಸಖತ್ ಗಮನ ಸೆಳೆಯುತ್ತಿದ್ದು , ಶಿವಣ್ಣನ ರಗಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಈ ಟಿಸರ್ ಗೆ ಸೂಪರ್ ರೆಸ್ಪಾನ್ಸ್ ಸಿಗ್ತಿದ್ದು , ಸಿನಿಮಾದ ಮೇಲೆ ಕಾತರತೆ ಮತ್ತಷ್ಟು ಹೆಚ್ಚಾಗಿದೆ..