Mandeep Roy : ಸ್ಯಾಂಡಲ್ ವುಡ್ ನಟ ಮಂದೀಪ್ ರಿಗೆ ಹೃದಯಾಘಾತ
ಕನ್ನಡ ಸಿನಿಮಾರಂಗದ ಖ್ಯಾತ ಹಿರಿಯ ನಟ ಮನ್ ದೀಪ್ ರಾಯ್ ಅವರಿಗೆ ಹೃದಯಾಘಾತವಾಗಿದ್ದು , ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ..
3 ದಿನಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿದ್ದು , ಅವರನ್ನ ಬೆಂಗಳೂರಿನ ಶೇಷಾದ್ರಿಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ..
ಇವರು ಸುಮಾರು 500 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ.. ನೆಗೆಟಿವ್ , ಪೋಷಕ ಪಾತ್ರ , ಹಾಸ್ಯ ಪಾತ್ರಗಳಲ್ಲೂ ಮಿಂಚಿದ್ದಾರೆ..
ಸದ್ಯ ನಟನ ಆರೋಗ್ಯ ಸ್ಥಿತಿ ಬೆನ್ನಲ್ಲೇ ಅವರು ಆರ್ಥಿಕವಾಗಿಯೂ ತೊಂದರೆ ಅನುಭವಿಸುತ್ತಿದ್ದು , ನೆರವಿನ ಅಗತ್ಯವಿದೆ ಎನ್ನಲಾಗ್ತಿದೆ..
ಮನ್ ದೀಪ್ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ..
Mandeep Roy : Sandalwood Actor hospitalized due to heart attack