Darshan : ‘ಇದು ನನ್ನ ಟೆರಿಟೆರಿ , ಬೇರೆ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡಲ್ಲ’..!!
ಚಾಲೆಂಜಿಂಗ್ ಸ್ಟಾರ್ ನಟನೆಯ ಕ್ರಾಂತಿ ( Kranthi) ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ.. ಸಿನಿಮಾ ರಿಲೀಸ್ ಆಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ..
ಅಂದ್ಹಾಗೆ ಈಗ ಸದ್ಯಕ್ಕೆ ಪ್ಯಾನ್ ಇಂಡಿಯಾ ಮೇನಿಯಾ ನಡೀತಿದೆ.. ಬಾಲಿವುಡ್ ಸಿನಿಮಾಗಳೆದುರು ಸೌತ್ ಸಿನಿಮಾಗಳು ಅಬ್ಬರಿಸುತ್ತಿವೆ.. ಅದ್ರಲ್ಲೂ ತೀರ ಇತ್ತೀಚಗೆ ಸೂಪರ್ ಹಿಟ್ ಆದ ಕಾಂತಾರ ಇದಕ್ಕೆ ನಿದರ್ಶನ…
KGF 2 , RRR , ವಿಕ್ರಾಂತ್ ರೋಣ , ಪುಷ್ಪ , ಕಾಂತಾರ ಹೀಗೆ ಇತ್ತೀಚೆಗೆ ಬಾಲಿವುಡ್ ಹುಟ್ಟಡಗಿಸಿದ ಸಿನಿಮಾಗಳಿಂದ ಮತ್ತಷ್ಟು ಪ್ಯಾನ್ ಇಂಡಿಯನ್ ಕ್ರೇಜ್ ಹೆಚ್ಚಾಗಿದೆ..
ಹೀಗಾಗಿಯೇ ಕ್ರಾಂತಿ ಸಹ ಪ್ಯಾನ್ ಇಂಡಿಯನ್ನಾ ಎಂಬ ಚರ್ಚೆಗಳಾಗ್ತಿದೆ.. ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ಈ ಬಗ್ಗೆ ಡಿ ಬಾಸ್ ಮಾತನಾಡಿದ್ದು ,
ಅಂತಹ ಸಿನಿಮಾ ಮಾಡಲು ಹೋದರೆ ನಮ್ಮ ಕಥೆ ಹೇಳಲು ಸಾಧ್ಯವಾಗಲ್ಲ. ನ್ಯಾಷನಲ್ ಇಶ್ಯೂ ಬಗ್ಗೆ ಮಾತನಾಡಬೇಕು. ಮಾತೃಭೂಮಿ ಮೊದಲು. ಉಳಿದಿದ್ದು ಆಮೇಲೆ ನೋಡೋಣ ಎಂದಿದ್ದಾರೆ.
ಅಂದ್ಹಾಗೆ ಕ್ರಾಂ ತಿ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿಯೇ ರಿಲೀಸ್ ಆಗ್ತಿದೆ..
ಆದ್ರೆ ಬೇರೆ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡುವುದು ಪ್ಯಾನ್ ಇಂಡಿಯನ್ ಸಿನಿಮಾಗಳಿಗೆ ಅನಿವಾರ್ಯ..
ಆದ್ರೆ ನಾನು ಬೇರೆ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡಲ್ಲ ಎಂದಿದ್ದಾರೆ ದರ್ಶನ್..
ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ. ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಬೇರೆ ಭಾಷೆಗೆ ಡಬ್ ಮಾಡಿ ಕೊಡ್ತೀನಿ. ಅವರು ಹಾಕಿದ್ರು ಖುಷಿ ಹಾಕದೇ ಇದ್ದರೂ ಖುಷಿ ಎಂದಿದ್ದಾರೆ..