Most searched Films 2022 : ವಿಶ್ವಾದ್ಯಂತ ಅತಿ ಹೆಚ್ಚು ಹುಡುಕಾಡಲ್ಪಟ್ಟ ಸಿನಿಮಾಗಳ ಪಟ್ಟಿ..!!
ಇನ್ನೇನು 22 ದಿನ ಕಳೆದ್ರೆ 2022 ಮುಗಿದೇ ಹೋಗಿ 2023 ಆರಂಭವಾಗಲಿದೆ.. 2020 ಒಂದ್ ರೀತಿ ಕೊರೊನಾದಿಂದ ಸಿನಿಮಾರಂಗದ ಪಾಲಿಗೆ ಕಹಿಯಾಗಿ ಪರಿಣಮಿಸಿತ್ತು..
ಆದ್ರೆ 2022 ಮಾತ್ರ ಸಿನಿಮಾರಂಗಕ್ಕೆ ವರದಾನವಾಗಿದ್ದು ಸುಳ್ಳಲ್ಲ… ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿ ಸೂಪರ್ ಹಿಟ್ ಆದವು..
KGF 2 , RRR , ಕಾಂತಾರ , ವಿಕ್ರಾಂತ್ ರೋಣ , ಚಾರ್ಲಿ , ಕಾರ್ತಿಕೇಯ 2 ದಂತಹ ಸಿನಿಮಾಗಳು ಸೆನ್ಷೇಷನ್ ಸೃಷ್ಟಿ ಮಾಡಿದ್ದವು.. ಅಷ್ಟೇ ಅಲ್ಲ ಬಾಲಿವುಡ್ ನ ಸಾಲು ಸಾಳು ಸಿನಿಮಾಗಳನ್ನ ಮಕಾಡೆ ಮಲಗಿಸಿದ ಶ್ರೇಯವೂ ಸೌತ್ ಸಿನಿಮಾಗಳದ್ದು…
ಅಂದ್ಹಾಗೆ ಇಡೀ ವಿಶ್ವಾದ್ಯಂತ 2022 ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ( Search) ಸಿನಿಮಾಗಳ ಪಟ್ಟಿಯಲ್ಲಿ ಎರೆಡು ಭಾರತೀಯ ಸಿನಿಮಾ ಸ್ಥಾನ ಪಡೆದಿದೆ.. ಅದರಲ್ಲಿ ಒಂದು ನಮ್ಮ ಕನ್ನಡ ಸಿನಿಮಾ ಅನ್ನೋದು ಹೆಮ್ಮೆ..
ಹೌದು..!
2022 ರಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಹುಡುಕಾಡಲ್ಪಟ್ಟ ಸಿನಿಮಾಗಳ ಪಟ್ಟಿ..!!
- ಥಾರ್ : ಲವ್ ಅಂಡ್ ಥಂಡರ್
- ಬ್ಲಾಕ್ ಆಡಂ
- ಟಾಪ್ ಗನ್ : ಮ್ಯಾವೆರಿಕ್
- ದಿ ಬ್ಯಾಟ್ ಮನ್
- ಎನ್ ಕ್ಯಾಂಟೊ
- ಬ್ರಹ್ಮಾಸ್ತ್ರ
- ಜುರಾಸಿಕ್ ವರ್ಲ್ಡ್ ಡೊಮಿನಿಯನ್
- KGF 2
- ಅನ್ ಚಾರ್ಟೆಡ್
- ಮೊರ್ಬಿಯಸ್