Film Release updates : ಡಿಸೆಂಬರ್ ಶುಭ ಶುಕ್ರವಾರ – ಸಿನಿಮಾ ರಸಿಕರಿಗೆ ಜಾತ್ರೆ – ಕನ್ನಡದಲ್ಲೇ 9 ಸಿನಿಮಾಗಳು ರಿಲೀಸ್..!! ಬೇರೆ ಭಾಷೆಗಳಲ್ಲಿ ಎಷ್ಟು..??
2022 ಇನ್ನೇನು ಮುಗಿಯುತ್ತಾ ಬಂದಿದೆ… ಈ ವರ್ಷ ಸಿನಿಮಾರಂಗದ ಪಾಲಿಗೆ ಒಂದ್ ರೀತಿ ವರದಾನವಾಗಿದೆ..
ಕೊರೊನಾ ನಂತರ ಸಿನಿಮಾರಂಗವೂ ಚೇತರಿಸಿಕೊಂಡಿತ್ತು.. ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿ ಕೆಲವು ಅಬ್ಬರಿಸಿದವು , ಹಲವು ಸಿನಿಮಾಗಳು ಮುಗ್ಗರಿಸಿದವು..
ಬಾಲಿವುಡ್ ನ ಸ್ಟಾರ್ ಗಳ ಸಿನಿಮಾಗಳೇ ಅಟ್ಟರ್ ಫ್ಲಾಪ್ ಆಗಿ ಬಾಲಿವುಡ್ ಹುಟ್ಟಡಗಿಸಿದರೆ , ಸೌತ್ ಸಿನಿಮಾಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ.. ಇದಕ್ಕೆ ಉತ್ತಮ ನಿದರ್ಶನವೆಂದ್ರೆ ನಮ್ಮದೇ ಕನ್ನಡದ 4 ಸಿನಿಮಾಗಳು KGF 2 , ವಿಕ್ರಾಂತ್ ರೋಣ , 777 ಚಾರ್ಲಿ , ಕಾಂತಾರ.
ಅಂದ್ಹಾಗೆ ವಿಷ್ಯ ಏನಪ್ಪಾ ಅಂದ್ರೆ ಸಿನಿಮಾರಂಗದವರ ಪಾಲಿಗೆ ಅದೃಷ್ಟದ ತಿಂಗಳೆಂದೇ ಕರೆಯುವ ಡಿಸೆಂಬರ್ ನಲ್ಲಿ ಪ್ರತಿ ವರ್ಷ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತವೆ.. ಅಂತೆಯೇ ಈಗ ಅದ್ರಲ್ಲೂ ಇಂದೇ ( ಡಿಸೆಂಬರ್ 9) ಒಂದಲ್ಲ ಎರೆಡಲ್ಲ ಕನ್ನಡವೊಂದ್ರಲ್ಲೇ ಬರೋಬ್ಬರಿ 9 ಸಿನಿಮಾಗಳು ರಿಲೀಸ್ ಆಗಿವೆ..
ತೆಲುಗಿನಲ್ಲಿ 13 ಸಿನಿಮಾಗಳು ರಿಲೀಸ್ ಆಗಿವೆ..
ಇನ್ನೂ , ತಮಿಳು , ಮಲಯಾಳಂ , ಹಿಂದಿಯಲ್ಲೂ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿವೆ..
ಒಂದ್ ರೀತಿ ಸಿನಿಮಾ ಪ್ರೇಕ್ಷಕರಿಗೆ ಇದು ಜಾತ್ರೆಯಂತೆ ಆಗಿದೆ..
ಅಂದ್ಹಾಗೆ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗಿವೆ ಅಂತ ನೋಡೋದಾದ್ರೆ ,
ಕನ್ನಡ
‘ವಿಜಯಾನಂದ’ : ಕನ್ನಡದ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಸಿನಿಮಾವೆಂಬ ಹೆಗ್ಗಳಿಕೆ ಈ ಸಿನಿಮಾದ್ದು.. ಯಶಸ್ವಿ ಉದ್ಯಮಿ, ರಾಜಕಾರಣಿ ವಿಜಯಸಂಕೇಶ್ವರ ಅವರ ಜೀವನ ಆಧಾರಿತ ಸಿನಿಮಾ… ಅವರ ಸಾಧನೆಯ ಯಶೋಗಾಥೆ..
ಇಂದು ಶುಭ ಶುಕ್ರವಾರ ರಿಲೀಸ್ ಆದ ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ಭಾರತದಲ್ಲಿ ಸುಮಾರು 1000 ಕ್ಕೂ ಅಧಿಕ ಸ್ಕ್ರೀನ್ ಗಳು ಹಾಗೂ ವಿದೇಶದಲ್ಲಿ ಸುಮಾರು 250 ಕ್ಕೂ ಅಧಿಕ ಪರದೆ ಮೇಲೆ ಬಿಡುಗಡೆಗೊಂಡಿದ್ದು , ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ..
ಸಿನಿಮಾಕ್ಕೆ ವಿಜಯಸಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್ ಬಂಡವಾಳ ಹೂಡಿದ್ದು, ಸಿನಿಮಾದಲ್ಲಿ ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. ವಿಜಯ್ಸಂಕೇಶ್ವರ್ ಪಾತ್ರದಲ್ಲಿ ನಟ ನಿಹಾಲ್ ಕಾಣಿಸಿಕೊಂಡಿದ್ದಾರೆ..
‘ಬಾಂಡ್ ರವಿ’ : ಮತ್ತೊಂದೆಡೆ ಕನ್ನಡದ ಮತ್ತೊಂದು ನಿರೀಕ್ಷೆಯ ಸಿನಿಮಾ ಪ್ರಮೋದ್ ನಟನೆಯ ಬಾಂಡ್ ರವಿ ಕೂಡ ರಿಲೀಸ್ ಆಗಿದೆ.. ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ..
ಅಂದ್ಹಾಗೆ ಪ್ರಭಾಸ್ – ಪ್ರಶಾಂತ್ ನೀಲ್ – ಹೊಂಬಾಳೆ ಕಾಂಬಿನೇಷನ್ ಬಿಗ್ ಬಜೆಟ್ ಪ್ಯಾನ್ ಇಂಡಿಯನ್ ಸಲಾರ್ ಸಿನಿಮಾದಲ್ಲಿಯೂ ಕೂಡ ಪ್ರಮೋದ್ ನಟಿಸಿದ್ದಾರೆ.. ಅಂದ್ಹಾಗೆ ಈ ಸಿನಿಮಾಗೆ ರಿಷಬ್ ಶೆಟ್ಟಿ ಶುಭಕೋರಿದ್ದಾರೆ..
ಉಳಿದಂತೆ ಪ್ರಿಯಾಮಣಿ ನಟನೆಯ ‘ ಡಿ-56’ , ‘ಪ್ರಾಯಷಃ’ , ‘ಮೈಸೂರು ಡೈರೀಸ್’ , ಹಾರರ್ ಸಿನಿಮಾ ‘ನಾನೇ ನರ ರಾಕ್ಷಸ’ , ‘ಪಂಖುರಿ’, ‘ದ್ವಿಪಾತ್ರ’, ‘ಸುನಾಮಿ 143’ ಸಿನಿಮಾಗಳು ರಿಲೀಸ್…
ತೆಲುಗು
ತೆಲುಗಿನಲ್ಲಿ ಒಂದಲ್ಲ ಎರೆಡಲ್ಲ ಬರೋಬ್ಬರಿ 13 ಸಿನಿಮಾಗಳು ರಿಲೀಸ್ ಆಗಿವೆ..
ಗುರ್ತುಂದಾ ಸೀತಾಕಾಲಂ
ಚಪ್ಪಾಲನಿ ವುಂದಿ
ಪಂಚತಂತ್ರಂ
ಸಿವಿಲ್ ಎಂಜಿನಿಯರ್
ಮುಖವಿಚಿತ್ರಂ
ಲೆಹರಿಯಾ
ವಿಜಯಾನಂದ ತೆಲುಗು ಡಬ್ ಆವೃತ್ತಿ
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಲಿಂಗ ಪ್ರೇಮಕತೆ ‘ಮಾ ಇಷ್ಟಂ’
ಲವ್ ,
ಏಯ್ ಬುಜ್ಜಿ ನೀಕು ನೇನು
ನಮಸ್ತೆ ಸೇಠ್ ಜೀ
ಮಾಯಾಬಜಾರ್ ( ರೀ ರಿಲೀಸ್ )
ಪ್ರೇಮ ದೇಶಂ ( ರಿಲೀಸ್ )
ತಮಿಳು..
ನಾಯಿ ಶೇಕರ್ ರಿಟರ್ನ್ಸ್
ವರಲಾರು ಮುಖ್ಯಂ
ವಿಜಯಾನಂದ ತಮಿಳು ಡಬ್
ಡಿ56 ಡಬ್
ಗುರುಮೂರ್ತಿ,
ಹಾರರ್ ಸಿನಿಮಾ ಎಸ್ಟೇಟ್
ಹಾರರ್ ಇವಿಲ್
ಹಿಂದಿ
ಕಾಜೋಲ್ ನಟನೆಯ ಸಲಾಮ್ ವೆಂಕಿ
ವಧ್
ಶಾಡೋಸ್ ಆಫ್ ಅಸ್ಸಾಸಿನ್
ಲೈಫ್ ಈಸ್ ಗುಡ್
ಡೇಂಜರಸ್
ಜೋಶ್
ವಿಜಯಾನಂದ ಹಿಂದಿ ಡಬ್
ಮಲಯಾಳಂ
ಭರತ್ ಸರ್ಕಸ್
ವೀಕನ್
ರೆಡ್ ಶಾಡೋ
ಐ ಆಮ್ ಫಾದರ್
ವಿಜಯಾನಂದ ಮಲಯಾಳಂ ಡಬ್