Rashmika : ‘ಇದೆಲ್ಲಾ ಸುಳ್ಳು’ – ಬ್ಯಾನ್ ಬಗ್ಗೆ ಮೌನ ಮುರಿದ ಚಷ್ಮಾ ಸುಂದರಿ..!!
ರಶ್ಮಿಕಾ ಮಂದಣ್ಣ…!!
ಕೊಡಗಿನ ಬೆಡಗಿ…!!
ಆದ್ರೆ ಸಿನಿಮಾರಂಗದಲ್ಲಿ ಸದ್ಯಕ್ಕೆ ಟಾಲಿವುಡ್ ನಟಿ ಅಂತಲೇ ನೆಟ್ಟಿಗರು ಬಿಂಬಿಸುತ್ತಿದ್ದಾರೆ..
ಕರ್ನಾಟಕದವರೇ ಆದ್ರೂ ಕನ್ನಡದ ಮೇಲಿನ ಅವರ ತಾತ್ಸಾರವೇ ಅವರನ್ನ ಜನ ಇಷ್ಟು ಟ್ರೋಲ್ ಮಾಡೋದಕ್ಕೆ ಮುಖ್ಯ ಕಾರಣ..
ಯಾರಾದ್ರೂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ, ಸ್ವಭಾಷಿಕರಿಂದಲೇ ಟೀಕೆಗೆ ಗುರಿಯಾಗ್ತಾರಂದ್ರೆ ಅದು ರಶ್ಮಿಕಾ ಮಂದಣ್ಣ ಅಂತ ಹಿಂದೂ ಮುಂದೂ ಯೋಚನೆ ಮಾಡ್ದೇ ಹೇಳಬಹುದು… ಅದು ಚಷ್ಮಾ ಸುಂದರಿ ರಶ್ಮಿಕಾ ಅಂತ.!!
ಟ್ರೋಲ್ ಗಳಿಗಷ್ಟೇ ಸೀಮಿತವಾಗ್ದೇ ಇದೀಗ ರಶ್ಮಿಕಾಟ ಬ್ಯಾನ್ ಆಗ್ಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ…
ರಶ್ಮಿಕಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ..
ವಿವಾದಗಳಲ್ಲಿ ಸಿಲುಕಿ ಒದ್ದಾಡ್ತಿರುವ ರಶ್ಮಿಕಾ ಮಂದಣ್ಣಗೆ ಇದು ಒಂದ್ ರೀತಿ ತಾನೇ ತಂದುಕೊಂಡ ಭಾಗ್ಯ ಅಂದ್ರೆ ತಪ್ಪಾಗಲ್ಲ..
ಕಿರಿಕ್ ಪಾರ್ಟಿ…!! 2016 ರಲ್ಲಿ ಹೊಸ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದ ಸಿನಿಮಾ.. ಈ ಸಿನಿಮಾದಲ್ಲಿ ಕನ್ನಡಕ ಹಾಕಿಕೊಂಡಿದ್ದ ಸಾನ್ವಿ ನ್ಯಾಷನಲ್ ಕ್ರಶ್ ಆಗಿಬಿಟ್ಟರು.. ಇಲ್ಲಿಂದಲೇ ರಶ್ಮಿಕಾಗೇ ಸುವರ್ಣ ಯುವ ಶುರುವಾಗಿದ್ದು..
ಇಂದು ತೆಲುಗು , ತಮಿಳು , ಬಾಲಿವುಡ್ ನಲ್ಲೂ ಸೆಟಲ್ ಆಗೋಕೆ ಟ್ರೈ ಮಾಡ್ತಿದ್ದಾರೆ.. ಯಶಸ್ಸಿನ ಉತ್ತುಂಗದಲ್ಲಿದ್ದಾರೆ ಅಂದ್ರೆ ಅದಕ್ಕೆ ಕಾರಣ ನಮ್ಮ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ… ಸಿನಿಮಾದ ನಾಯಕರಾಗಿದ್ದವರು ರಕ್ಷಿತ್ ಶೆಟ್ಟಿ.. ನಿರ್ದೇಶಕರು ರಿಷಭ್ ಶೆಟ್ಟಿ..
ಆದ್ರೆ ತಮ್ಮನ್ನ ಈ ಮಟ್ಟಕ್ಕೆ ಬೆಳಕಿ ಜನರಿಗೆ ರಶ್ಮಿಕಾ ಅನ್ನೋ ಪ್ರತಿಭೆಯನ್ನ ಪರಿಚಯಿಸಿದ ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನೂ ಹೇಳದೇ ರಶ್ಮಿಕಾ ವ್ಯಂಗ್ಯಾತ್ಮಕವಾಗಿ ಕೈ ಸನ್ನೆ ತೋರಿಸಿದ್ದರು.. ಇದೇ… ಇದೇ ಅಸಲಿಗೆ ಕ ನ್ನಡಿಗರನ್ನ ಕೆರಳಿಸಿರುವುದು…
ಇದಾದ ನಂತರದಿಂದ ರಶ್ಮಿಕಾ ಬ್ಯಾ ಅಭಿಯಾನ ಶುರುವಾಗಿದೆ..
ಆದ್ರೆ ಇದೀಗ ರಶ್ಮಿಕಾ ಮಂದಣ್ಣ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ..
ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ರಶ್ಮಿಕಾ
ಯಾರೋ ಕೆಲವರು ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ.. ಇದರಲ್ಲಿ ಸತ್ಯಾಂಶ ಇಲ್ಲ. ಅವರು ಏನು ಹೇಳುತ್ತಿದ್ದಾರೆ ಅದು ಸರಿನೋ ತಪ್ಪೋ ಎನ್ನುವುದನ್ನು ಅವರ ವಿವೇಚನೆಗೆ ಬಿಡುತ್ತೇನೆ ಎಂದಿದ್ದಾರೆ.
ಇನ್ನೂ ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ. ಈವರೆಗೆ ಇಂತಹ ವಿಚಾರ ನನ್ನ ಬಳಿಗೆ ಬಂದಿಲ್ಲ ಎಂದಿದ್ದಾರೆ.
Rashmika clarifies about ban from films – cinibazaar