Vijayananda : ವಿಜಯ್ ಸಂಕೇಶ್ವರ್ ರ ಬಯೋಪಿಕ್..!!
‘ವಿಜಯಾನಂದ’ : ಕನ್ನಡದ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಸಿನಿಮಾವೆಂಬ ಹೆಗ್ಗಳಿಕೆ ಈ ಸಿನಿಮಾದ್ದು.. ಯಶಸ್ವಿ ಉದ್ಯಮಿ, ರಾಜಕಾರಣಿ ವಿಜಯಸಂಕೇಶ್ವರ ಅವರ ಜೀವನ ಆಧಾರಿತ ಸಿನಿಮಾ… ಅವರ ಸಾಧನೆಯ ಯಶೋಗಾಥೆ..
ಇಂದು ಶುಭ ಶುಕ್ರವಾರ ರಿಲೀಸ್ ಆದ ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ಭಾರತದಲ್ಲಿ ಸುಮಾರು 1000 ಕ್ಕೂ ಅಧಿಕ ಸ್ಕ್ರೀನ್ ಗಳು ಹಾಗೂ ವಿದೇಶದಲ್ಲಿ ಸುಮಾರು 250 ಕ್ಕೂ ಅಧಿಕ ಪರದೆ ಮೇಲೆ ಬಿಡುಗಡೆಗೊಂಡಿದ್ದು , ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ..
ಸಿನಿಮಾಕ್ಕೆ ವಿಜಯಸಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್ ಬಂಡವಾಳ ಹೂಡಿದ್ದು, ಸಿನಿಮಾದಲ್ಲಿ ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. ವಿಜಯ್‌ಸಂಕೇಶ್ವರ್ ಪಾತ್ರದಲ್ಲಿ ನಟ ನಿಹಾಲ್ ಕಾಣಿಸಿಕೊಂಡಿದ್ದಾರೆ..