Anurag Kashyap : ಸೌತ್ ಸಿನಿಮಾಗಳ ಅನುಸರಿಸಿದರೆ ಅವನತಿಯತ್ತ ಬಾಲಿವುಡ್ – ಅನುರಾಗ್
ಸೌತ್ ಸಿನಿಮಾಗಳು ಸದ್ಯ ಬಾಲಿವುಡ್ ಮುಂದೆ ಅಬ್ಬರಿಸುತ್ತಿವೆ.. ಸೌತ್ ಸಿನಿಮಾಗಳ ಆರ್ಭಟದ ಮುಂದೆ ಬಾಲಿವುಡ್ ನ ಸ್ಟಾರ್ ಗಳ ಸಿನಿಮಾಗಳೇ ಮಕಾಡೆ ಮಲಗಿವೆ.. ಇತ್ತೀಚೆಗೆ ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ನಟನೆಯ ದೊಬಾರಾ ಡಿಸಾಸ್ಟರ್ ಆಗಿದೆ..
ಕಾಂತಾರ , KGF 2 , RRR , ಪುಷ್ಪ ದಂತಹ ಸಿನಿಮಾಗಳು ಸೌತ್ ನ ಕ್ರೇಜ್ ಹೆಚ್ಚಿಸಿರುವಾಗಲೇ ಸೌತ್ ಸಿನಿಮಾಗಳನ್ನ ಅನುಕರಿಸುವ ಕಾರಣ ಬಾಲಿವುಡ್ ಅವನತಿಯತ್ತ ಸಾಗುತ್ತಿದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ..
ಗಲಟ್ಟಾ ಪ್ಲಸ್ ನ ರೌಂಡ್ ಟೇಬಲ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇದೀಗ ಏನಾಗುತ್ತಿದೆ ಎಂದರೆ ಎಲ್ಲರೂ ಪ್ಯಾನ್-ಇಂಡಿಯಾ ಚಲನಚಿತ್ರವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಅದರಿಂದ ಸಿಗುವ ಯಶಸ್ಸು ಯಶಸ್ಸು 5-10% ಮಾತ್ರ ಆಗಿರುತ್ತದೆ.
ಕಾಂತಾರ ಮತ್ತು ಪುಷ್ಪದಂತಹ ಚಲನಚಿತ್ರಗಳು ಹೊರಗೆ ಹೋಗಿ ನಿಮ್ಮ ಕಥೆಗಳನ್ನು ಹೇಳಲು ನಿಮಗೆ ಧೈರ್ಯವನ್ನು ನೀಡಿ , ಬಾಕ್ಸ್ ಆಫೀಸ್ ನಲ್ಲಿ ಇತಿಹಾಸವನ್ನು ಸೃಷ್ಟಿಸಿದ ಯಶ್ ಅವರ ಕೆಜಿಎಫ್ ಅಧ್ಯಾಯ 1 ಮತ್ತು 2 ರ ಬಗ್ಗೆ ಅನುರಾಗ್ ಮತ್ತಷ್ಟು ಮಾತನಾಡಿದರು..
ಕೆಜಿಎಫ್ 2, ಎಷ್ಟೇ ದೊಡ್ಡ ಯಶಸ್ಸು ಸಾಧಿಸಿದ್ದರೂ, ನೀವು ಅದನ್ನು ಅನುಕರಿಸಲು ಯೋಜನೆಯನ್ನು ಹೊಂದಿದ್ದರೆ , ನೀವು ಅವನತಿಯತ್ತ ಸಾಗಲು ಪ್ರಾರಂಭಿಸುತ್ತಿರುವಂತೆ ಎಂದಿದ್ದಾರೆ..