Arman Malik : ಏಕಕಾಲದಲ್ಲಿ ಇಬ್ಬರೂ ಪತ್ನಿಯರು ಗರ್ಭಿಣಿಯರಾದ ಸುದ್ದಿ ಹಂಚಿಕೊಂಡ ಯೂಟ್ಯೂಬರ್
ಯೂಟ್ಯೂಬರ್ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರು ಏಕಕಾಲದಲ್ಲಿ ಗರ್ಭಿಣಿಯಾಗಿದ್ದಾರೆಂದು ಬಹಿರಂಗಪಡಿಸಿದ್ದಾರೆ.
ಅರ್ಮಾನ್ ಮಲಿಕ್ ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಇಬ್ಬರು ಪತ್ನಿಯರಿದ್ದಾರೆ..
ಹೈದರಾಬಾದ್ ಮೂಲದ ಯೂಟ್ಯೂಬರ್ ಅರ್ಮಾನ್ ಮಲಿಕ್ ಇತ್ತೀಚೆಗೆ ತನ್ನ ಇಬ್ಬರೂ ಪತ್ನಿಯರೂ ಏಕಕಾಲದಲ್ಲೇ ಗರ್ಭಿಣಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಅರ್ಮಾನ್ ಮಲಿಕ್ ಸಾಕಷ್ಟು ಟ್ರೋಲ್ ಆಗ್ತಿದ್ದಾರೆ.. ನಿಮಗೆ ನಾಚಿಕೆಯಾಗಬೇಕಂತಲೇ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ…
ಇನ್ ಸ್ಟಾಗ್ರಾಮ್ ನಲ್ಲಿ 1.5 ಮಿಲಿಯನ್ ಮತ್ತು ಯೂಟ್ಯೂಬ್ನಲ್ಲಿ 2 ಮಿಲಿಯನ್ ಅನುಯಾಯಿಗಳನ್ನು ಅರ್ಮಾನ್ ಹೊಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಪತ್ನಿಯರು ಹಾಗೂ ಮಗನ ಜೊತೆಗಿನ ಫೋಟೋ ಹಂಚಿಕೊಂಡು “ನನ್ನ ಕುಟುಂಬ” ಎಂದು ಶೀರ್ಷಿಕೆ ನೀಡಿದ್ದಾರೆ.
“ಈ ವ್ಯಕ್ತಿಗೆ ಮಾತ್ರ ಈ ಪ್ರತಿಭೆ ಇದೆ. ಅವನು ಸಮಯದ ಬಗ್ಗೆಯೂ ಕಾಳಜಿ ವಹಿಸುತ್ತಾನೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ‘‘ನನಗೆ ಶಾಕ್ ಆಯ್ತು… ಇಬ್ಬರೂ ಒಂದೇ ಸಲ ಗರ್ಭಿಣಿಯಾಗೋದು ಹೇಗೆ’’ ಎಂದು ಮತ್ತೊಬ್ಬರು ಹೇಳಿದರು.
‘ಅಣ್ಣ ನೀನು ಕ್ರಿಕೆಟ್ ಟೀಮ್ ಮಾಡ್ತೀಯ’ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಾನೂನು ಇಬ್ಬರು ಹೆಂಡತಿಯರನ್ನು ಅನುಮತಿಸುವುದೇ? ಎಂದು ಮತ್ತೊಬ್ಬರು ಕೇಳಿದ್ದಾರೆ..
2011 ರಲ್ಲಿ ಪಾಯಲ್ ಅವರೊಂದಿಗೆ ಮದುವೆಯಾಗಿದ್ದು , ಚಿರಾಯು ಮಲಿಕ್ ಎಂಬ ಮಗನಿದ್ದಾನೆ.. 2018 ರಲ್ಲಿ, ತನ್ನ ಮೊದಲ ಹೆಂಡತಿಯ ಅತ್ಯುತ್ತಮ ಸ್ನೇಹಿತೆಯಾಗಿದ್ದ ಕೃತಿಕಾ ಅವರನ್ನು ವಿವಾಹವಾದರು. ನಾಲ್ಕು ಸದಸ್ಯರ ಕುಟುಂಬ ಅಂದಿನಿಂದ ಒಟ್ಟಿಗೆ ವಾಸಿಸುತ್ತಿದೆ.