Patan Besharam Song : ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಡಿಪ್ಪಿ – ಶಾರುಖ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸುತ್ತಿರುವ ಪಠಾಣ್ ಚಿತ್ರದ ಬೇಶರಂ ರಂಗ್ ಎಂಬ ಮೊದಲ ಹಾಡು ಬಿಡುಗಡೆಯಾಗಿದೆ. ನಟಿ ದೀಪಿಕ ಪಡುಕೋಣೆ ಈಜುಡುಗೆ ಧರಿಸಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಪಠಾಣ್ ಚಿತ್ರದ ಟೀಸರ್ ಈಗಾಗಲೇ ಬಿಡುಗಡಯಾಗಿದ್ದು ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ ಇದರ ಜೊತೆಗೆ ಬಿಡುಗಡೆಯಾಗಿರುವ ಈ ಹಾಡು ಚಿತ್ರದ ಹೈಪ್ ಹೆಚ್ಚಿಸಿದೆ. ಬೇಶರಂ ರಂಗ್ ಹಾಡಿನ ಮೂಲಕ ಚಿತ್ರದ ಪ್ರಚಾರವನ್ನ ಶುರು ಮಾಡಲಾಗಿದೆ.
ಮಲ್ಲೋರ್ಕಾ ದ್ವೀಪದಲ್ಲಿ ಚಿತ್ರೀಕರಿಸಲಾಗಿರು ರೊಮ್ಯಾಂಟಿಕ್ ಹಾಡಿನಲ್ಲಿ ಶಾರುಖ್ ಖಾನ್ ಶರ್ಟ್ ಲೆಸ್ ಬಾಡಿ ಮೂಲಕ ಮತ್ತೊಮ್ಮೆ 8 ಪ್ಯಾಕ್ ತೋರಿಸಿದ್ದಾರೆ. ಪಠಾಣ್ ನ ಮೊದಲ ಹಾಡಿನಲ್ಲಿ ಎಸ್ ಆರ್ ಕೆ ಮತ್ತಿ ದೀಪಿಕಾ ಅವ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ.
ದೀಪಿಕಾ, ಶಾರುಖ್ ಜೋಡಿ ಒಟ್ಟಾಗಿ ನಟಿಸುತ್ತಿರು ನಾಲ್ಕನೇ ಸಿನಿಮಾ ಇದಾಗಿದೆ. 2007 ತೆರಕಂಡ ಓಂ ಶಾಂತಿ ಓಂ ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ ಚೆನ್ನೈ ಎಕ್ಸ್ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಾಲ್ ಮಾಡಿತ್ತು.
ಪಠಾನ್ ಜನವರಿ 25, 2023 ರಂದು ಬಿಡುಗಡೆಯಾಗಲಿದೆ. 5 ವರ್ಷಗಳ ನಂತರ SRK ಥಿಯೇಟರ್ ಗಳಿಗೆ ಮರಳುತ್ತಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ ಜವಾನ್ ಮತ್ತು ರಾಜ್ಕುಮಾರ್ ಹಿರಾನಿಯ ಡಂಕಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.