Rajanikanth : ಹೊಂಬಾಳೆ – ರಜನಿಕಾಂತ್ ಕಾಂಬಿನೇಷನ್ ನಲ್ಲಿ ಸಿನಿಮಾ..??
ಸ್ಟಾರ್ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಮ್ಸ್ ತಮಿಳು , ಮಲಯಾಳಂ , ತೆಲುಗು ಇಂಡಸ್ಟ್ರಿಗೂ ಕಾಲಿಟ್ಟಿದ್ದು , ಹಿಂದಿ ಇಂಡಸ್ಟ್ರಿಗೂ ಎಂಟ್ರಿ ಕೊಡುವ ಪ್ಲಾನ್ ಮಾಡುತ್ತಿದೆ ಎನ್ನಲಾಗುತ್ತಿದೆ..
ಇದೀಗ ಸೌತ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗೆ ಹೊಂಬಾಳೆ ಬಂಡವಾಳ ಹೂಡಲಿದೆ ಎಂಬ ಸುದ್ದಿಯೊಂದು ಸಖತ್ ಚರ್ಚೆಯಾಗ್ತಿದೆ..
ಹೌದು..!
ಇದಕ್ಕೆ ಕಾರಣ ರಜನಿಕಾಂತ್ ಅವರ 72 ನೇ ಜನ್ಮ ದಿನಕ್ಕೆ ಹೊಂಬಾಳೆ ಫಿಲಮ್ಸ್ ವಿಶೇಷ ರೀತಿಯಲ್ಲಿ ವಿಷ್ ಮಾಡಿರುವುದು..
ಹುಟ್ಟುಹಬ್ಬದ ಶುಭಾಶಯಗಳು ತಲೈವಾ, ನೀವು ಮತ್ತಷ್ಟು ಪಭಾವವನ್ನು ಬೀರಿ ಸ್ಪೂರ್ತಿ ನೀಡಿ ಎಂದು ಬರೆದುಕೊಂಡಿದೆ.
ಹೊಂಬಾಳೆ ಫಿಲಮ್ಸ್ ಸಾಮಾನ್ಯವಾಗಿ ಯಾವ ತಾರೆಗೆ ವಿಷ್ ಮಾಡಿತ್ತೋ ಅವರೊಂದಿಗೆ ಪಕ್ಕಾ ಸಿನಿಮಾ ಮಾಡುತ್ತೆ ಎಂಬ ಲೆಕ್ಕಾಚಾರ ಸಿನಿಮಾ ಪಂಡಿತರದ್ದು..
ಹೀಗಾಗಿಯೇ ನೆಟ್ಟಿಗರು ವರಜನಿಕಾಂತ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಶನ್‌ನಲ್ಲಿ ಚಿತ್ರ ಮೂಡಿ ಬರುವುದು ಖಚಿತ ಎನ್ನುತ್ತಿದ್ದಾರೆ.