K L Rahul – Athiya Shetty : ಮದುವೆಗೆ ಮುಹೂರ್ತ ನಿಗದಿ..!!!
ಟೀಮ್ ಇಂಡಿಯಾದ ಆಟಗಾರ , ಕನ್ನಡಿಗ KL RAHUL ಕ್ರಿಕೆಟ್ ಹೊರತಾಗಿ ಸುನಿಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜೊತೆಗಿನ ಪ್ರೇಮ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.
ಕನ್ನಡಿಗ , ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಜೊತೆಗೆ ಕೆ ಎಲ್ ರಾಹುಲ್ ಡೇಟಿಂಗ್ ನಲ್ಲಿರುವ ವಿಚಾರ ಗೊತ್ತೇ ಇದೆ..
ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಅಲ್ಲದೇ ಈ ಜೋಡಿಯ ಮದುವೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ ಎಂದು ಹೇಳಲಾಗ್ತಿದೆ..
ಅಂದ್ಹಾಗೆ ಈ ಜೋಡಿ ಮದುವೆಯ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಹೇಳಲಾಗ್ತಿದೆ..
2023 ಜನವರಿಯಲ್ಲಿ ಇಬ್ಬರೂ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ.. ಜನವರಿ 23ಕ್ಕೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.
ಜನವರಿ 21ರಿಂದ ಇಬ್ಬರ ಮದುವೆ ಸಮಾರಂಭ ಪ್ರಾರಂಭವಾಗಲಿದೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್ ನಲ್ಲಿಯೇ ಜ.23ಕ್ಕೆ ಮದುವೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
K L Rahul – Athiya Shetty,weddingupdates