Ramcharan : ಮೊದಲ ಮಗುವಿನ ನಿರೀಕ್ಷೆಯಲ್ಲಿ ಚರಣ್ – ಉಪಾಸನಾ ದಂಪತಿ
ರಾಮ್ ಚರಣ್ ಹಾಗೂ ಉಪಾಸನಾ ಟಾಲಿವುಡ್ ನ ಕ್ಯೂಟ್ ಕಪಲ್…
ಇಬ್ಬರೂ ಮದುವೆಯಾಗಿ 10 ವರ್ಷಗಳೇ ಕಳೆದಿದ್ದು ಇದೀಗ ಉಪಾಸನ ಗರ್ಭಿಣಿಯಾಗಿದ್ದಾರೆ..
ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ..
ಚಿರಂಜೀವಿ ಇತ್ತೀಚೆಗೆ ಟ್ವೀಟ್ ಮಾಡಿ ಸೊಸೆ ಉಪಾಸನಾ ಗರ್ಭಿಣಿ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.
ಆದ್ರೆ ಇದೀಗ ಉಪಾಸನಾ ಹಾಗೂ ರಾಮಚರಣ್ ರನ್ನ ಟ್ರೋಲ್ ಮಾಡಲಾಗ್ತಿದೆ.. ಈ ಹಿಂದೆ ಮಕ್ಕಳ ಮಾಡಿಕೊಳ್ಳುವ ಬಗ್ಗೆ ಉಪಾಸನ ನೀಡಿದ್ದ ಹೇಳಿಕೆಗಳನ್ನ ಇಟ್ಕೊಂಡು ಈಗ ಟ್ರೋಲ್ ಮಾಡಲಾಗ್ತಿದೆ…
ನಾವು ನಾಯಿಗಳನ್ನು, ಕುದುರೆಗಳನ್ನು ಎಷ್ಟೋ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ಅಂತಹದ್ರಲ್ಲಿ ನಮ್ಮ ಮಗುವನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಊಹಿಸಿ. ಇದು ನಮಗೆ ಬಹಳ ಮುಖ್ಯವಾದದ್ದು. ಮಗುವನ್ನು ಹೆರುವುದು ಅಷ್ಟೇ ಅಲ್ಲ. ಅವರನ್ನು ಒಳ್ಳೆ ರೀತಿಯಲ್ಲಿ ಬೆಳೆಸುವುದು ಬಹಳ ಮುಖ್ಯ. ಈ ವಿಚಾರದಲ್ಲಿ ನಮಗಂತ ಒಂದಷ್ಟು ಪ್ಲ್ಯಾನಿಂಗ್ ಇದೆ ಎಂದು 2017ರಲ್ಲಿ ಕಾರ್ಯಕ್ರಮವೊಂದರಲ್ಲಿ ಉಪಾಸನಾ ಹೇಳಿದ್ದರು.
ಅಪೋಲೋ ಆಸ್ಪತ್ರೆ ಸಮೂಹದ ಒಡೆಯ ಅನಿಲ್ ಕಾಮಿನೇನಿ ಮಗಳಾಗಿರುವ ಉಪಾಸನಾ 2012ರಲ್ಲಿ ನಟ ರಾಮ್ ಚರಣ್ ರನ್ನ ಪ್ರೀತಿಸಿ ಮದುವೆ ಆಗಿದ್ದರು. ಲಂಡನ್ ರೀಜೆಂಟ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಉಪಾಸನಾ ಅಪೋಲೊ ಸಮೂಹದ ಅಪೋಲೊ ಲೈಫ್ ವಿಭಾಗದ ಉಪಾಧ್ಯಕ್ಷೆ ಆಗಿದ್ದಾರೆ.
ramcharan -upasana expecting first child