Rashmika : ರಶ್ಮಿಕಾ ಜೊತೆಗೆ ಈ ಸ್ಟಾರ್ ನಟನಿಗೆ ಡೇಟಿಂಗ್ ಹೋಗೋ ಆಸೆಯಂತೆ..!!
ರಶ್ಮಿಕಾ ಮಂದಣ್ಣ…
ಆದ್ರೆ ಸಿನಿಮಾರಂಗದಲ್ಲಿ ಸದ್ಯಕ್ಕೆ ಟಾಲಿವುಡ್ ನಟಿ ಅಂತಲೇ ನೆಟ್ಟಿಗರು ಬಿಂಬಿಸುತ್ತಿದ್ದಾರೆ..
ಕರ್ನಾಟಕದವರೇ ಆದ್ರೂ ಕನ್ನಡದ ಮೇಲಿನ ಅವರ ತಾತ್ಸಾರವೇ ಅವರನ್ನ ಜನ ಇಷ್ಟು ಟ್ರೋಲ್ ಮಾಡೋದಕ್ಕೆ ಮುಖ್ಯ ಕಾರಣ..
ಯಾರಾದ್ರೂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ, ಸ್ವಭಾಷಿಕರಿಂದಲೇ ಟೀಕೆಗೆ ಗುರಿಯಾಗ್ತಾರಂದ್ರೆ ಅದು ರಶ್ಮಿಕಾ ಮಂದಣ್ಣ ಅಂತ ಹಿಂದೂ ಮುಂದೂ ಯೋಚನೆ ಮಾಡ್ದೇ ಹೇಳಬಹುದು… ಅದು ಚಷ್ಮಾ ಸುಂದರಿ ರಶ್ಮಿಕಾ ಅಂತ.!!
ಟ್ರೋಲ್ ಗಳಿಗಷ್ಟೇ ಸೀಮಿತವಾಗ್ದೇ ಇದೀಗ ರಶ್ಮಿಕಾಟ ಬ್ಯಾನ್ ಆಗ್ಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ…
ರಶ್ಮಿಕಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ..
ವಿವಾದಗಳಲ್ಲಿ ಸಿಲುಕಿ ಒದ್ದಾಡ್ತಿರುವ ರಶ್ಮಿಕಾ ಮಂದಣ್ಣಗೆ ಇದು ಒಂದ್ ರೀತಿ ತಾನೇ ತಂದುಕೊಂಡ ಭಾಗ್ಯ ಅಂದ್ರೆ ತಪ್ಪಾಗಲ್ಲ..
ತಮಿಳು ನಟ ವಿಶಾಲ್, ರಶ್ಮಿಕಾ ಮಂದಣ್ಣ ಜೊತೆ ಸೆಲೆಬ್ರೆಟಿ ಡೇಟ್ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.