Atlee : ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಟ್ಲಿ – ಪ್ರಿಯ ದಂಪತಿ..!!
ಖ್ಯಾತ ತಮಿಳಿನ ನಿರ್ದೇಶಕ ಅಟ್ಲಿ ಹಾಗೂ ಪತ್ನಿ ಪ್ರಿಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ..
2014 ರಲ್ಲಿ ಈ ಜೋಡಿ ಮದುವೆಯಾಗಿದ್ದರು.. ಇದೀಗ ಮಗುವಿನ ಸ್ವಾಗತಕ್ಕೆ ಸಜ್ಜಾಗುತ್ತಿದ್ದು , ಅಟ್ಲಿ ಅವರು ಈ ವಿಚಾರವನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.. ವಿಶೇಷ ಫೋಟೋವನ್ನ ಹಂಚಿಕೊಂಡಿದ್ದು , ಅವರಿಗೆ ಅಭಿಮಾನಿಗಳು ತಾರೆಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಯಶಸ್ವಿ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅಟ್ಲಿ ಥೇರಿ , ಮರ್ಸಲ್ , ಬಿಗಿಲ್ ನಂತಹ ಸೂಪರ್ ಹಿಒಟ್ ಸಿನಿಮಾಗಳನ್ನ ನಟಿಸಿದ್ದಾರೆ.. ಪ್ರಸ್ತುತ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ..
ಜವಾನ್ ಸಿನಿಮಾದಲ್ಲಿ ಅಟ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ.
ಕೃಷ್ಣ ಪ್ರಿಯಾ ಅವರನ್ನು 2014ರಲ್ಲಿ ಅಟ್ಲಿ ಮದುವೆಯಾಗಿದ್ದರು.. ಅಂದ್ಹಾಗೆ ಈ ದಂಪತಿಯು ಎ ಫಾರ್ ಆಪಲ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.. ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ.
ಮದುವೆಯಾಗಿ ಎಂಟು ವರ್ಷಗಳ ನಂತರ, ಇದೀಗ ಅಟ್ಲಿ ಮತ್ತು ಪ್ರಿಯಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಟ್ಲಿ ಮಾಡಿರುವ ಟ್ವೀಟ್ ನಲ್ಲಿ ಏನಿದೆ..??
ಇಷ್ಟು ವರ್ಷಗಳ ಕಾಲ ನಮ್ಮ ಮೇಲೆ ಜನ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ, ನಿಮ್ಮ ಹಾರೈಕೆ ಮತ್ತು ಪ್ರೀತಿ ನಮ್ಮ ಪುಟ್ಟ ಮಗುವಿನ ಮೇಲೆಯೂ ಇರಬೇಕು ಎಂದು ನಾವು ಬಯಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಪುಟ್ಟ ಮಗುವಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ..
Atlee , krishna priya expecting their first child , cinibazaar