Yash : ಮಾಜಿ ಸಚಿವ ನಾರಾ ಲೋಕೇಶ್ ರನ್ನು ಭೇಟಿಯಾಗಿದ್ದ ಯಶ್..!!
ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್ ಅವರ ಮುಂದಿನ ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ..
ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್ ನಲ್ಲಿ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಭೇಟಿಯಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು , ಸಖತ್ ಕಮ್ಯೂರಿಯಾಸಿಟಿ ಮೂಡಿಸಿದೆ..
ಆಂಧ್ರ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಪುತ್ರ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಯಶ್ ಭೇಟಿಯಾಗಿರೋದು ರಾಜಕೀಯ ರಂಗ ಮತ್ತು ಸಿನಿಮಾರಂಗದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ..
ಹೈದರಾಬಾದ್ ಗೆ ಯಶ್ ಭೇಟಿ ನೀಡಿದ್ದು, ಹೋಟೆಲ್ ವೊಂದರಲ್ಲಿ ಕೆಲ ಸಮಯ ನಾರಾ ಲೋಕೇಶ್ ಹಾಗೂ ಯಶ್ ಮಾತುಕತೆ ನಡೆಸಿದ್ದಾರೆ.