Yash : ಫ್ಯಾನ್ಸ್ ಗಾಗಿ ಎರೆಡು ಗಂಟೆ ನಿಂತ ರಾಕಿಂಗ್ ಸ್ಟಾರ್
ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು , ಯಶಸ್ಸಿನ ಉತ್ತುಂಗದಲ್ಲಿರುವ ಯಶ್ ಅವರಿಗೆ ಎಷ್ಟೇ ಒಡ್ಡ ಸ್ಟಾರ್ ಡಮ್ ಇದ್ರೂ ಕೂಡ ಅವರು ತುಂಬಾ ಸರಳ ಜೀವಿ ಅನ್ನೋದೇ ಅವರನ್ನ ಅಭಿಮಾನಿಗಳು ಇಷ್ಟು ಪಡೋದಕ್ಕೆ ಕಾರಣ..
ಇತ್ತೀಚಿಗೆ ಯಶ್ ಹೈದ್ರಾಬಾದ್ ಗೆ ತೆರಳಿದ್ದರು.. ಅವರು ಮಾಜಿ ಸಚಿವ ನಾರಾ ಲೋಕೇಶ್ ಅವರ ಭೇಟಿ ಮಾಡಿದ್ದ ಫೋಟೋ ಕೂಡ ವೈರಲ್ ಆಗಿತ್ತು..
ಇದೀಗ ಬೆಂಗಳೂರಿನಲ್ಲಿ ಯಶ್, ಎರಡು ಗಂಟೆ ನಿಂತು ಅಭಿಮಾನಿಗಳಿಗೆ ಫೋಟೋ ಕ್ಲಿಕ್ಕಿಸಲು ಅವಕಾಶ ಕೊಟ್ಟು ಮತ್ತೊಮ್ಮೆ ಫ್ಯಾನ್ಸ್ ಗಳ ಹೃದಯ ಗೆದ್ದಿದ್ದಾರೆ..
ಎರಡು ಗಂಟೆ ನಿಂತು ಪ್ರತಿಯೊಬ್ಬರಿಗೂ ಫೋಟೋ ಕೊಟ್ಟಿದ್ದಾರೆ. ಪ್ರೀತಿಯಿಂದ ಫೋಟೋಗೆ ಯಶ್ ಪೋಸ್ ಕೊಟ್ಟಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಯಶ್ ಕೂಡ ಭಾಗವಹಿಸಿದ್ದರು.
ಸಂದರ್ಶನದ ಬಳಿಕ ಸುಮಾರು 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಯಶ್, 2 ಗಂಟೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು..
ಸದ್ಯ ಯಶ್ ಅವರ ಮುಂದಿನ ಸಿನಿಮಾದ ಅಪ್ ಡೇಟ್ಸ್ ಗಾಗಿ ಜಾತಕ ಪಕ್ಷಿಗಳಂತೆ ಅಭಿಮಾನಿಗಳು ಕಾಯುತ್ತಿದ್ದಾರೆ..
Yash stood 2 hours for his fans