Avatar : The Way Of Water – ನೀರೊಳಗಿನ ಅದ್ಭುತ ಜಗತ್ತು..!!
ಹಲವು ನಿರೀಕ್ಷೆಗಳ ನಡುವೆ ‘ಅವತಾರ್ – ದಿ ವೇ ಆಫ್ ವಾಟರ್’ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸುಮಾರು 15 ಸಾವಿರ ಕೋಟಿಯ ಬೃಹತ್ ಬಜೆಟ್ನಲ್ಲಿ ನಿರ್ಮಿಸಲಾಗಿರುವ ಹಾಲಿವುಡ್ ಚಿತ್ರ ಇದಾಗಿದ್ದು, ನಿರೀಕ್ಷೆಯಂತೆ ವಿಶ್ವದಾದ್ಯಂತ ಭರ್ಜಜರಿ ಓಪನಿಂಗ್ ಪಡೆದುಕೊಂಡಿದೆ.
ದೇಶಾದ್ಯಂತ ‘ಅವತಾರ್ 2’ ಚಿತ್ರವನ್ನ ವಿಕ್ಷಿಸಲು ಮಲ್ಟಿಪ್ಲೆಕ್ಸ್ಗಳಿಗೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಈ ಸಿನಿಮಾವನ್ನು 3ಡಿ ಆವೃತ್ತಿಯಲ್ಲಿ ವೀಕ್ಷಿಸ ಬೇಕು ಎಂದು ಅಭಿಮಾನಿಗಳು ಆಸಕ್ತಿ ತೋರಿಸುತ್ತಿದ್ದಾರೆ.
ಚಿತ್ರದ ಅವಧಿ 3 ಗಂಟೆ 10 ನಿಮಿಷ. ಸಾಗರದ ಆಳದಲ್ಲಿ ತೋರಿಸಿರುವ ದೃಶ್ಯಗಳು ವಾವ್ ಎನಿಸುವಂತಿವೆ. ಸುಮಾರು 30 ನಿಮಿಷಗಳ ಕಾಲ ನಡೆಯುವ ಕ್ಲೈಮ್ಯಾಕ್ಸ್ ಈ ಚಿತ್ರದ ಜೀವಾಳ. ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಮ್ಮ ಕಲ್ಪನೆಯನ್ನೂ ಮೀರಿ ಚಿತ್ರವನ್ನ ಚಿತ್ರೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ವಿಎಫ್ ಎಕ್ಸ್ ಕ್ವಾಲಿಟಿಯಯನ್ನ ಹೊಗಳದವರೇ ಇಲ್ಲ ಎನ್ನಬಹುದು.
ಅವತಾರ್ 2 ಚಿತ್ರ ಸಿನಿ ಸಿನಿಮಾ ಪ್ರೇಮಿಗಳಿಗೆ ಹಬ್ಬದಂತಿದೆ. ಈ ಚಿತ್ರ ಜಗತ್ತಿನಾದ್ಯಂತ ಹೊಸ ದಾಖಲೆ ಬರೆಯುವುದು ಖಚಿತ ಎನ್ನುತ್ತಿವೆ ಟ್ರೇಡ್ ಮೂಲಗಳು.