BiggBoss Kannada 9 : ದೀಪಿಕಾ ದಾಸ್ ಆ ಒಂದು ಮಾತಿಗೆ ಸಿಟ್ಟಾದ ರಾಜಣ್ಣ
ಬಿಗ್ ಬಾಸ್ ಸೀಸನ್ 9 ಈಗಾಗಲೇ ಸುಮಾರು 12 ವಾರಗಳನ್ನ ಪೂರೈಸಿದೆ.. ದೀಪಿಕಾ ದಾಸ್ ಒಮ್ಮೆ ಎಲಿಮಿನೇಟ್ ಆಗಿಯೂ ಮತ್ತೆ ಮನೆಗೆ ಪ್ರವೇಶ ಪಡೆದಿದ್ದಾರೆ.. ಇತ್ತ ಆರಂಭದಿಂದಲೂ ಹೈಲೇಟ್ ಆಗುತ್ತಿರುವ ರೂಪೇಶ್ ರಾಜಣ್ಣ ಹಾಗೂ ದೀಪಿಕಾಗೆ ಆಗಾಗ ಕಿರಿಕ್ ಆಗ್ತಲೇ ಇರುತ್ತದೆ..
ಇತ್ತೀಚೆಗೆ ರೂಪೇಶ್ ರಾಜಣ್ಣ ಅವರು ದೀಪಿಕಾ ದಾಸ್ ವಿರುದ್ಧ ಕಿಡಿಕಾರಿದ್ದಾರೆ.. ಟಾಸ್ಕ್ ವೇಳೆ ಬೈ ಮಿಸ್ ಆಗಿ ರೂಪೇಶ್ ರಾಜಣ್ಣ ಜೋಡಿಸಿದರು ಎಂದ ದೀಪಿಕಾ ದಾಸ್ ಹೇಳಿಕೆ ರಾಜಣ್ಣರನ್ನ ಕೆಣಕಿದೆ..
ಅವರ ಮಾತಿನಿಂದ ರೂಪೇಶ್ ರಾಜಣ್ಣ ಬೇದರಗೊಂಡಿದ್ದಾರೆ. ಸ್ಪರ್ಧಿಗಳಿಗೆ ಬಿಗ್ ಬಾಸ್ ಕಲರ್ ಟವರ್ ಎಂಬ ಚಟುವಟಿಕೆಯನ್ನ ನೀಡಿದ್ದರು.
ಇದರಲ್ಲಿ ಮೂರು ಸ್ಪರ್ಧಿಗಳು ತಮಗೆ ಮೀಸಲಿರುವ ಡಬ್ಬಗಳನ್ನು, ನಾಲ್ಕು ಅಂತಸ್ತಿನ ಸ್ಟ್ಯಾಂಡ್ ನಲ್ಲಿ ಜೋಡಿಸಬೇಕಿತ್ತು. ಜೋಡಿಸಿದ ಡಬ್ಬಗಳನ್ನು ನಾಲ್ಕೂ ದಿಕ್ಕಿನಿಂದ ನೋಡಿದಾಗ.. ಯಾವುದೇ ಡಬ್ಬದಲ್ಲಿ ಯಾವುದೇ ಬಣ್ಣ ಮರುಕಳಿಸಬಾರದಿತ್ತು. ಈ ಚಟುವಟಿಕೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ ಹಾಗೂ ರೂಪೇಶ್ ಶೆಟ್ಟಿ ಭಾಗವಹಿಸಿದರು.
ಆಟವನ್ನು ಮೊದಲು ಮುಗಿಸಿದ್ದು ಅಮೂಲ್ಯ ಗೌಡ. ಆನಂತರ ರೂಪೇಶ್ ರಾಜಣ್ಣ ಮುಗಿಸಿದರು. ಆಟವನ್ನು ಮುಗಿಸಲು ರೂಪೇಶ್ ಶೆಟ್ಟಿ ಅವರಿಂದ ಸಾಧ್ಯವಾಗಲಿಲ್ಲ. ಈ ವೇಳೆ, ಹೊರಗಡೆ ಇಟ್ಟುಕೊಂಡು ಜೋಡಿಸುವ ಬದಲು ಅಂತಸ್ತಿನ ಒಳಗೆ ಜೋಡಿಸಿದ್ದರೆ, ಟೈಮ್ ಉಳಿಯುತ್ತಿತ್ತು. ಅಮೂಲ್ಯ ಅವರದ್ದು ಬೇರೆ ತರಹ ವರ್ಕ್ ಆಯ್ತು. ರೂಪೇಶ್ ರಾಜಣ್ಣ ಅವರು ಬೈ ಮಿಸ್ ಆಗಿ ಮಾಡಿದರು. ಆದರೆ ಅವರದ್ದು ಮ್ಯಾಚ್ ಆಯ್ತು ಎಂದು ದೀಪಿಕಾ ದಾಸ್ ಹೇಳಿದ್ದರು..
ಇದ್ರಿಂದ ರೂಪೇಶ್ ರಾಜಣ್ಣ ಸಿಟ್ಟಾಗಿದ್ದು ಬೈ ಮಿಸ್ಟೇಕ್ ಅನ್ನಬೇಡಿ.. ಅದು ಯೋಚನೆ ಮಾಡಿಯೇ ಇಟ್ಟಿದ್ದು ಎಂದಿದ್ದಾರೆ.. ಇದಕ್ಕೆ ದೀಪಿಕಾ ಉತ್ತರಿಸುತ್ತಾ ಒಂದು ನಿಮಿಷ ರಾಜಣ್ಣ , ಬೈ ಮಿಸ್ಟೇಕ್ ಒಂದೇ ಶೇಪ್ ಬಂದಿರೋದರ ಬಗ್ಗೆ ನಾನು ಹೇಳಿದ್ದು ನೀವು ಏನೇನೋ ಅರ್ಥ ಮಾಡಿಕೊಳ್ಳಬೇಡಿ ಎಂದಾಗ ಡಬಲ್ ಕಲರ್ ಬಂದಿದ್ದರ ಬಗ್ಗೆ ಯೋಚನೆ ಮಾಡಿ ಇಟ್ಟಿದ್ದು. ಅದನ್ನ ಬೈ ಮಿಸ್ಟೇಕ್ ಅಂದುಕೊಳ್ಳಬೇಡಿ ಎಂದಿದ್ದಾರೆ..
ನಂತರ ದೀಪಿಕಾ ದಾಸ್ ಓಕೆ ಎಂದು ಸಾರಿ ಕೇಳಿದ್ದಾರೆ.. ಹೀಗೆ ಕೆಲ ಹೊತ್ತು ಮಾತು ನಡೆದಿದ್ದು ದೀಪಿಕಾ ದಾಸ್ ಕೊನೆಯಲ್ಲಿ ಅವರಿಗೆ ಅರ್ಥೈಸಲು ಪ್ರಯತ್ನಿಸಿ ಸುಮ್ಮನಾಗುತ್ತಾರೆ..