Kangana Ranouth : ಕೇಸರಿ ವಿವಾದಲ್ಲಿ ದೀಪಿಕಾ ಆಯ್ತು ಈಗ ಕಂಗಾನಗೆ ಕಂಟಕ..!!
ಒಂದೆಡೆ ಕೇಸರಿ ಬಣ್ಣದ ಬಿಕಿಯಲ್ಲಿ ದೀಪಿಕಾ , ಪಠಾಣ್ ಬೇಷರಂ ಹಾಡಿನಲ್ಲಿ ಕಾಣಿಸಿಕೊಂಡಿರೋದು ಹಿಂದೂ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ…
ವಿರೋಧಿಸುತ್ತಾ ದೀಪಿಕಾರನ್ನ ಟ್ರೋಲ್ ಮಾಡ್ತಾ ಬಾಯ್ಕಾಟ್ ಕರೆ ನೀಡಿದ್ದಾರೆ.. ಆದ್ರೆ ಸದಾ ಧರ್ಮದ ಪರ ಧ್ವನಿ ಎತ್ತುತ್ತ ಬಾಲಿವುಡ್ ವಿರುದ್ಧ ಧೈರ್ಯವಾಗಿ ಮಾತನಾಡೋ ಕಂಗನಾಗೆ ಇದೀಗ ಕೇಸರಿ ಕಂಟಕ ಎದುರಾಗಿದೆ..
ಹೌದು,.,.!
ಕಂಗನಾ ಒಂದು ಬೋಲ್ಡ್ ಮತ್ತು ಸಿಕ್ಕಾಪಟ್ಟೆ ಡೇರಿಂಗ್ ಶೋ ಲಾಕ್ ಅಪ್ ರಿಯಾಲಿಟಿ ಶೋ ನಡೆಸಿಕೊಡ್ತಿದ್ದರು.. ಬಾಲಾಜಿ ಒಟಿಟಿ ಆಪ್ ನಲ್ಲಿ ಸ್ಟ್ರೀಮ್ ಆಗುತ್ತಿತ್ತು.. ಆದ್ರೆ ಖೈದಿ ಮಾದರಿಯ ೀ ಕಾನ್ಸೆಪ್ಟ್ ನಲ್ಲಿ ಸ್ಪರ್ಧಿಗಳ ಬಟ್ಟೆ ಬಣ್ಣ ಕೇಸರಿ ಅನ್ನೋದನ್ನ ಗಮನಿಸಬೇಕು.. ಹಾಗೂ ಪ್ರೋಮೋ ಪೋಸ್ಟರ್ ಗಳಲ್ಲಿ ಕಂಗನಾ ಕೇಸರಿ ಬಟ್ಟೆ ಧರಿಸಿದ್ದವರ ಮೇಲೆ ಶೂ ಧರಿಸಿ ಕಾಲಿಟ್ಟಿದ್ದರು..
ಈಗ ಕೇಸರಿ ವಿವಾದದ ನಡುವೆ ಕಂಗನಾರ ಪೋಸ್ಟರ್ ವೈರಲ್ ಮಾಡುತ್ತಾ , ಪದ್ಮಶ್ರೀ ಕಂಗನಾ ಬ್ಯಾನ್ ಯಾವಾಗ..??
ದೀಪಿಕಾರನ್ನ ವಿರೋಧಿಸೋದಾದ್ರೆ ಕೇಸರಿ ಬಟ್ಟೆ ಧರಿಸಿದ್ದವರ ಮೇಲೆ ಕಾಲಿಟ್ಟ ಕಂಗನಾರನ್ನ ಎಷ್ಟು ಬಲವಾಗಿ ವಿರೋಧಿಸಬೇಕೆಂದು ಪ್ರಶ್ನೆ ಮಾಡ್ತಿದ್ದಾರೆ..
ಒಟ್ನಲ್ಲಿ ದೀಪಿಕಾಗೆ ಸಂಕಷ್ಟವಾಗಿರುವ ಕೇಸರಿ ವಿವಾದದ ಸುಳಿಯಲ್ಲಿ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ಸಿಲುಕಿದ್ದಾರೆ..