Kranti : ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟ ಡಿ ಬಾಸ್ – ‘ಒಂದು ಹೆಜ್ಜೆ ಮುಂದಿಟ್ಟು ಉರಿಸೋಣ’..!!
ಹುಬ್ಬಳ್ಳಿಯಲ್ಲಿ ‘ಕ್ರಾಂತಿ’ 3 ನೇ ಹಾಡು ರಿಲೀಸ್
ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟ ಡಿ ಬಾಸ್
ಒಂದು ಹೆಜ್ಜೆ ಮುಂದಿಟ್ಟು ಉರಿಸೋಣ : ದರ್ಶನ್
ಹೊಸಪೇಟೆ ಅವಮಾನ ಪ್ರಸಂಗಕ್ಕೆ ದಾಸನ ತಿರುಗೇಟು
ಪುಷ್ಪಾವತಿ ಹಾಡಿಗೆ ಸಖತ್ ಮೆಚ್ಚುಗೆ
ದರ್ಶನ್ ಅವರ ಬಹುನಿರೀಕ್ಷೆಯ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ.. ಹಾಡಿಗೆ ಸೂಪರ್ ರೆಸ್ಪಾನ್ಸ್ ಸಿಗ್ತಿದೆ.. ಹಾಡು ರಿಲೀಸ್ ಆದ ನಂತರ ವೇದಿಕೆಯ ಮೇಲೆ ಮಾತನಾಡಿರುವ ದರ್ಶನ್ ಅವರು ಮೊನ್ನೆ ಹೊಸಪೇಟೆಯ ಘಟನೆ ನೆನೆದು ವಿರೋಧಿಗಳಿಗೆ ಸಖತ್ ತಿರುಗೇಟು ನೀಡಿದ್ದಾರೆ…
ಮೊನ್ನೆ ಒಂದು ಏಟು ಬಿತ್ತು , ಇಂದು ಹೂವಿನ ಮಳೆ ಸುರಿಸಿದ್ರಿ ಇಷ್ಟು ಸಾಕು ಅಲ್ವಾ, ಉರ್ಸೊಣ……. ಒಂದು ಹೆಜ್ಜೆ ಮುಂದೆ ಹೋಗಿ ಜಾಸ್ತಿ ಉರ್ಸೊಣ…
ಮೊನ್ನೆ ಆ ರೀತಿ ಮಾಡಿದವರಿಗೆ ಒಂದು ಮಾತು
ನೀವು ಏನೇ ಮಾಡಿ ನಾವು ತೆಲೆಗೆ ಹಾಕ್ಕೂಳಲ್ಲ, ನೋವು ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ ಎಂದು ಟಾಂಗ್ ನೀಡಿದ್ದಾರೆ..
ಅಂದ್ಹಾಗೆ ಆ ಪ್ರಸಂಗವನ್ನ ದರ್ಶನ್ ಅಭಿಮಾನಿಗಳು ತೀವ್ರವಾಗಿ ವಿರೋಧಿಸಿ ಆಕ್ರೋಶ ಹೊರಹಾಕಿದ್ದರು… ಜೊತೆಗೆ ತಾರೆಯರು ಕೂಡ ಡಿಬಾಸ್ ಪರ ಮಾತನಾಡಿ ಘಟನೆಯನ್ನ ಖಂಡಿಸಿದ್ದರು.. ವಿಶೇಷ ಅಂದ್ರೆ ಕಿಚ್ಚ ಸುದೀಪ್ ಅವರು ಕೂಡ ಡಿ ಬಾಸ್ ಪರ ಪೋಸ್ಟ್ ಹಾಕಿದ್ದರು.. ತಮ್ಮ ಪರ ನಿಂತ ಪ್ರತಿಯೊಬ್ಬರಿಗೂ ಸೋಷಿಯಲ್ ಮೀಡಿಯಾ ಮೂಲಕ ದರ್ಶನ್ ಅವರು ಧನ್ಯವಾದಗಳನ್ನ ಕೂಡ ಅರ್ಪಿಸಿದ್ದರು..
ಕ್ರಾಂತಿ ಸಿನಿಮಾದ ಧರಣಿ ಮಂಡಲ , ಬೊಂಬೆ ಬೊಂಬೆ ಹಾಡು ಈಗಾಗಲೇ ಹಿಟ್ ಆಗಿದ್ದು , ಇದೀಗ ಪುಷ್ಪಾವತಿ ಹಾಡು ಸದ್ದು ಮಾಡ್ತಿದೆ..