Deepika – Ranveer : ದೀಪಿಕಾಗಾಗಿ 119 ಕೋಟಿ ರೂಪಾಯಿ ಮೌಲ್ಯದ ಗಿಫ್ಟ್ ಕೊಟ್ಟ ರಣವೀರ್..!!!
ಬಾಲಿವುಡ್ ನ ಸ್ಟಾರ್ ಕಪಲ್ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ..
ಈ ಜೋಡಿ ಮದುವೆಯಾಗಿ 4 ವರ್ಷಗಳು ಕಳೆದಿವೆ..
ಇತ್ತೀಚೆಗೆ ಈ ಜೋಡಿ ಡಿವೋರ್ಸ್ ಪಡೆಯಲಿದ್ದಾರೆ ಎಂಬ ವದಂತಿಗಳೂ ಸಹ ಹಬ್ಬಿತ್ತು..
ಆದ್ರೆ ಆ ವದಂತಿಗಳಿಗೆ ಈ ಜೋಡಿ ತೆರೆ ಎಳೆದಿತ್ತು..
ಇದೀಗ ಪತ್ನಿ ದೀಪಿಕಾಗೆ ರಣವೀರ್ ಸಿಂಗ್ ಅವರು ಬರೋಬ್ಬರಿ 119 ಕೋಟಿ ರೂ. ಬೆಲೆಬಾಳುವ ಮನೆಯನ್ನು ಗಿಫ್ಟ್ ಆಗಿ ನೀಡಿದ್ದಾರಂತೆ.
ಮುಂಬೈನಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಿವಾಸಕ್ಕೆ ತುಂಬಾ ಹತ್ತಿರವಾಗಿದೆ ಈ ಮನೆ ಎನ್ನಲಾಗಿದೆ..
11,266 ಚದರಡಿಯನ್ನು ಇದು ಹೊಂದಿದೆಯಂತೆ. ಐಷಾರಾಮಿ ಮನೆಗೆ ಹೊಸ ರೀತಿಯ ವಿನ್ಯಾಸವನ್ನು ಈ ಜೋಡಿ ಮಾಡಿಸಿದ್ದಾರೆ ಎನ್ನಲಾಗ್ತಿದೆ. ವಿಶಾಲವಾದ ಟೆರೆಸ್ ಹೊಂದಿರುವ ಮನೆ ಇದಾಗಿದ್ದು, ಜಿಮ್, ಈಜುಗೊಳ ಸೇರಿದಂತೆ ಹೈಟೆಕ್ ಸವಲತ್ತುಗಳನ್ನು ಹೊಂದಿದೆ.
Deepika – Ranveer singh , bollywood