Tunisha Sharma : ಯುವ ನಟಿ ಸಾವು , ಶೀಜಾನ್ ಪರ ನಿಂತ ಉರ್ಫಿ..!!
ಯುವ ಕಿರುತೆರೆ ನಟಿ 20 ವರ್ಷದ ತುನಿಷಾ ಸಾವು ಭಾರೀ ಹಲ್ ಚಲ್ ಸೃಷ್ಟಿ ಮಾಡಿದೆ.. ದಿನಕ್ಕೊಂದು ತಿರುವು ಪಡೆದುಕೊಳ್ತಿದೆ…
ತುನಿಷಾ ಸಾವಿಗೆ ಆಕೆಯ ಬಾಯ್ ಫ್ರೆಂಡ್ ಶಿಜಾನ್ ಕಾರಣವೆಂದು ಹಲವರು ಆರೋಪಿಸುತ್ತಿದ್ದಾರೆ.. ಮತ್ತೊಂದೆಡೆ ತುನಿಷಾ ತಾಯಿ ಮತ್ತು ಆಕೆಯ ಸಹೋದರಿ ಸಹ ಇದೇ ಆರೋಪ ಮಾಡಿ ದೂರು ನೀಡಿದ್ದಾರೆ..
ಶಿಜಾನ್ ನನ್ನ ವಶಪಡಿಸಿಕೊಂಡಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.. ಆದ್ರೆ ಇದೀಗ ಶಿಜಾನ್ ಖಾನ್ ಪರ ಸೋಷಿಯಲ್ ಮೀಡಿಯಾ ಸೆನ್ಷೇಷನ್ ಉರ್ಫಿ ಪೋಸ್ಟ್ ಹಾಕಿದ್ದಾರೆ..
ತುನಿಷಾ ಪ್ರಕರಣದಲ್ಲಿ ನನ್ನ 2 ಅಭಿಪ್ರಾಯಗಳಿವೆ.
ಹೌದು..!!
ಅವನಿಂದ ತಪ್ಪಾಗಿರಬಹುದು. ಅವನು ಅವಳಿಗೆ ಮೋಸ ಮಾಡಿರಬಹುದು.
ಆದರೆ ಅವಳ ಸಾವಿಗೆ ನಾವು ಅವನನ್ನು ದೂಷಿಸಲು ಸಾಧ್ಯವಿಲ್ಲ.
ಉಳಿಯಲು ಇಷ್ಟಪಡದ ಯಾರನ್ನೂ ನಿಮ್ಮೊಂದಿಗೆ ಇರುವಂತೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಕೆಲವೊಮ್ಮೆ ಇದು ಪ್ರಪಂಚದ ಅಂತ್ಯದಂತೆ ತೋರುತ್ತದೆ. ಹಾಗಂತ ಅಮೂಲ್ಯವಾದ ಜೀವವನ್ನು ತ್ಯಜಿಸುವುದು ಸರಿಯಲ್ಲ. ನಿಮ್ಮನ್ನು ಪ್ರೀತಿಸುವ ಜನರ ಬಗ್ಗೆ ಯೋಚಿಸಿ. ನಿಮ್ಮನ್ನು ನೀವೇ ಪ್ರೀತಿಸಲು ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿ. ನಿಮಗೆ ನೀವೇ ನಾಯಕರಾಗಿ. ದಯವಿಟ್ಟು ಸ್ವಲ್ಪ ಸಮಯ ಕೊಡಿ. ಆತ್ಮಹತ್ಯೆಯ ನಂತರ ಸಂಕಟ ಕೊನೆಗೊಳ್ಳುವುದಿಲ್ಲ. ಇದರಿಂದ ಉಳಿದವರು ಇನ್ನಷ್ಟು ಬಳಲುತ್ತಿದ್ದಾರೆ ಎಂದು ನಟಿ ಪೋಸ್ಟ್ ಮಾಡಿದ್ದಾರೆ.
ನಟಿ ತುನಿಷಾ ಶರ್ಮಾ ಇದೇ ಡಿ.24 ರಂದು ಸಿನಿಮಾ ಶೂಟಿಂಗ್ ವೇಳೆ ಸೆಟ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್ ಖಾನ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.