Pooja Hegde : ಕರಾವಳಿ ಚೆಲುವೆಗೆ ಕೆಟ್ಟ ಸಮಯ..!! ಬ್ಯಾಕ್ ಟು ಬ್ಯಾಕ್ 6 ಫ್ಲಾಪ್..!!
ಟಾಲಿವುಡ್ ನಲ್ಲಿ ಸದ್ಯ ಟಾಪ್ ಹೀರೋಹಿನ್ ಗಳಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಟಾಲಿವುಡ್ ಕಾಲಿವುಡ್ ಜೊತೆ ಜೊತೆಗೆ ಹಿಂದಿ ಸಿನಿಮಾಗಳಲ್ಲೂ ಬ್ಯೂಸಿಯಾಗಿದ್ದಾರೆ. ದಕ್ಷಿಣ ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಪೂಜಾ ಹೆಗ್ಡೆಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅವಳ ಹಿಂದಿ ಚಲನಚಿತ್ರ ‘ಸರ್ಕಸ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ.
ಪೂಜಾ ಹೆಗ್ಡೆ ಇತ್ತೀಚಿನ ಚಿತ್ರ ಸರ್ಕಸ್ ಫೇಲ್ ಆಗಿದ್ದರಿಂದ ಪೂಜಾ ವೃತ್ತಿ ಜೀವನಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ಸತತವಾಗಿ 6 ಚಲನಚಿತ್ರಗಳು ಪ್ಲಾಫ್ ಆಗಿವೆ. ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ರಣವೀರ್ ಸಿಂಗ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರ ಕೂಡ ಬಾಕ್ಸ್ ಆಫೀಸ್ ಅಲ್ಲಿ ಸೋತಿದೆ.
ತೆಲುಗಿನಲ್ಲಿ ಸ್ವಲ್ಪ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ಅಂತಹ ನಟಿ ಒಂದು ಸಕ್ಸಸ್ ಗಾಗಿ ಕಾಯುತ್ತಿದ್ದಾಳೆ. ಸರ್ಕಸ್ ಸಿನಿಮ ನಂತರ ಸಲ್ಮಾನ್ ಅಭಿನಯದ ಮತ್ತೊಂದು ಹಿಂದಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಆ ಚಿತ್ರವೇ ಈಗ ಪೂಜಾ ಪಾಲಿಗೆ ಭರವಸೆ.
ಸಲ್ಮಾನ್ ಜೊತೆಗಿನ ಚಿತ್ರ ಬಿಡುಗಡೆಯಾದ ನಂತರ ಯಾವುದೇ ಹೊಸ ಹಿಂದಿ ಚಿತ್ರಕ್ಕೆ ಸಹಿ ಹಾಕಲು ಪೂಜಾ ಹೆಗ್ಡೆ ಬಯಸಿದ್ದಾರೆ. ಈ ನಡುವೆ ದಕ್ಷಿಣದಲ್ಲಿ ಒಂದೋ ಎರಡೋ ಹೊಸ ಚಿತ್ರಗಳಿಗೆ ಸಹಿ ಹಾಕಿದರೆ ಇಲ್ಲಿ ಚಿತ್ರ ಚೆನ್ನಾಗಿ ಓಡಿದರೆ ಕಳೆದು ಹೋದ ಮಾನ ಮರುಕಳಿಸಲಿದೆ ಎಂಬುದು ಗೊತ್ತೇ ಇದೆ. ಇಲ್ಲಿ ಯಶಸ್ಸಿನ ನಂತರ ಹೊಸ ಹಿಂದಿ ಚಿತ್ರಗಳಿಗೆ ಸಹಿ ಹಾಕಬಹುದು ಎಂಬುದು ಪೂಜಾ ಅಭಿಮತ.
Pooja Hegde, 6 Flop films of pooja