Kranti Trailer : ‘ಕ್ರಾಂತಿ’ ಅಬ್ಬರ , ಡಿ ಬಾಸ್ ಲುಕ್ ಬೆಂಕಿ..!!
“ನನ್ನ ಹೊಡೆಯೋಕೆ ಒಬ್ಬ ಕಾಯುತ್ತಿದ್ದರೆ , ನನ್ನ ಕಾಯೋದಕ್ಕೆ ಒಂದು ಸೈನ್ಯೆನೇ ಇದೆ..” ವ್ಹಾ ಕ್ರಾಂತಿ ಅಬ್ಬರ , ಡಿ ಬಾಸ್ ಲುಕ್ ,, ಟ್ರೇಲರ್ ಬೆಂಕಿಯಾಗಿದೆ..
ಕೊನೆಗೂ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಟ್ರೇಲರ್ ಜನವರಿ 7 ರಂದು ರಿಲೀಸ್ ಆಗಿದ್ದು , ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ..
ಟ್ರೇಲರ್ ನಲ್ಲಿ ‘ಗಜ’ ಗಾಂಭೀರ್ಯ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.. ಸ್ಯೂಟ್ ನಲ್ಲಿ ಡಿ ಬಾಸ್ ಸಖತ್ ಡೇರಿಂಗ್ ಅಂಡ್ ಡ್ಯಾಶಿಂಗ್ ಆಗಿ ಕಂಡಿದ್ದಾರೆ..
ಟ್ರೇಲರ್ ದಚ್ಚು ಧ್ವನಿಯಲ್ಲಿ ಒಂದು ಸಣ್ಣ ಕಥೆ ಹೇಳುತ್ತಾ ಶುರುವಾಗುತ್ತದೆ.. ಟ್ರೇಲರ್ ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ವಿ. ಹರಿಕೃಷ್ಣ ಅವರ ಮ್ಯಾಜಿಕ್ ಮೋಡಿ ಮಾಡಿದೆ. ಕ್ಲಾಸ್ ಮತ್ತು ಮಾಸ್ ಅವತಾರದಲ್ಲಿ ಮಿಂಚಿರುವ ದರ್ಶನ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಟ್ರೇಲರ್ ಕೊನೆಯಲ್ಲಿ ದರ್ಶನ್ ಬಾಡಿ ಲುಕ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ..
ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳುವ ಜೊತೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ಗೆ ಜೊತೆಯಾಗಿ ರಚಿತಾ ರಾಮ್ ನಟಿಸಿದ್ದಾರೆ. ವಿ. ರವಿಚಂದ್ರನ್, ರವಿಶಂಕರ್ ಮತ್ತು ಸಂಸದೆ ಸುಮತಲಾ ಸಹ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ..
ಜ.26 ರಂದು ಕ್ರಾಂತಿ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ..