Pavithra – Naresh : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ನರೇಶ್..???
ಟಾಲಿವುಡ್ ನಕಲ್ಲಿ ಸಕ್ರಿಯರಾಗಿದ್ದ ಕನ್ನಡದ ನಟಿ ಪವಿತ್ರಾ ಲೋಕೇಶ್ ಹಾಗೂ , ಟಾಲಿವುಡ್ ನಟ ನರೇಶ್ ಸಂಬಂಧ ಹಾದಿ ಬೀದಿ ರಂಪಾಟದ ನಂತರ ಕೊಂಚ ಶಾಂತವಾಗಿತ್ತು..
ಇದೀಗ ಮತ್ತೆ ನರೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..
ಪವಿತ್ರಾ ಲೋಕೇಶ್ ಮತ್ತು ನರೇಶ್ ಬಗ್ಗೆ ಕೆಲವರು ಬಹಳ ಕೀಳು ಮಟ್ಟದ ಕಥೆಗಳನ್ನು ಕಟ್ಟಿ ಹೇಳುತ್ತಿದ್ದಾರೆ. ಕೆಟ್ಟದ್ದಾಗಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಸುಳ್ಳು ಸುದ್ದಿಗಳನ್ನೂ ಪ್ರಕಟಿಸುತ್ತಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸತ್ತ ನರೇಶ್, ತಮ್ಮ ಮಾನಹಾನಿ ಮಾಡುವವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಅಂತಹವರ ವಿರುದ್ಧ ದೂರು ನೀಡಿದ್ದಾರೆ.
ನರೇಶ್ ಅವರ ಮಾನಹಾನಿ ಮಾಡುವುದಕ್ಕಾಗಿಯೇ ಕೆಲವರು ನೇಮಕವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Pavithra – Naresh , tollywood