Salman Khan : ಸಲ್ಮಾನ್ ಖಾನ್ ನ ಕೊಲೆ ಮಾಡುವುದೊಂದೇ ನನ್ನ ಗುರಿ ಎಂದ ಗ್ಯಾಂಗ್ ಸ್ಟರ್…
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರಿಗೆ ಸದ್ಯ ಜೀವ ಬೆದರಿಕೆ ಇರೋದು ಗೊತ್ತೇ ಇದೆ..
ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೆ ಟೀಮ್ ಸಲ್ಮಾನ್ ಖಾನ್ ಕೊಲೆ ಮಾಡಲು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದ್ದು ವಿಫಲವಾಗಿದೆ.
ಈ ಸಂಬಂಧವಾಗಿ ಅನೇಕರು ಈಗಾಗಲೇ ಅರೆಸ್ಟ್ ಆಗಿದ್ದಾರೆ. ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಆದ್ರೂ ಜೈಲಿನಿಂದಲೇ ಸಲ್ಮಾನ್ ಬಗ್ಗೆ ಮಾತನಾಡಿರುವಾತ ನನ್ನ ಜೀವನದ ಅಂತಿಮ ಗುರಿ ನಟ ಸಲ್ಮಾನ್ ಖಾನ್ ಕೊಲ್ಲುವುದೇ ಎಂದಿದ್ದಾನೆ.
ಅಲ್ಲದೇ ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾನೆ. ಅವನ ಈ ಮಾತಿನಿಂದ ಬಾಲಿವುಡ್ ನಲ್ಲಿ ನಲ್ಲಿ ಆತಂಕ ಸೃಷ್ಟಿಯಾಗಿದೆ.
ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.
ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಹೇಳಿದ್ದಾನೆ.
Salman Khan : Gangster says my only aim is to kill Salman Khan…