Dhanush Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಅವರು 18 ವರ್ಷಗಳ ಕಾಲದ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ.. ಡಿವೋರ್ಸ್ ಬಳಿಕ ತಮ್ಮ ತಮ್ಮ ಜೀವನ , ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ..
ಆದ್ರೆ ಧನುಷ್ ಕುರಿತಾಗಿ ಆಗಾಗ ಕೆಲವೊಂದು ರೂಮರ್ಸ್ ಹರಿದಾಡೋದು ನಿಲ್ಲುತ್ತಿಲ್ಲ..
ಹೌದು..!
ಶಾಕಿಂಗ್ ಅಂದ್ರೆ ಇದೀಗ ಧನುಷ್ ಸೌತ್ ನ ಸ್ಟಾರ್ ನಟಿ , ಕನ್ನಡ ಸಿನಿಮಾ ಸಿಂಹಾದ್ರಿಯ ಸಿಂಹ ಖ್ಯಾತಿಯ ನಟಿ ಮೀನಾ ಅವರೊಂದಿಗೆ ಮದುವೆಯಾಗಲಿದ್ದಾರೆಂದು ತಮಿಳು ಪೋಷಕ ನಟ ಬೈಲ್ವಾನ್ ಬಾಂಬ್ ಸಿಡಿಸಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಟ ಧನುಷ್ ಹಾಗೂ ನಟಿ ಮೀನಾ ಮದುವೆ ಆಗುತ್ತಾರೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಧನುಷ್ ಪತ್ನಿ ಐಶ್ವರ್ಯಗೆ ವಿಚ್ಛೇದನ ಕೊಟ್ಟಿದ್ದಾರೆ. ಮೀನಾ ಇತ್ತೀಚೆಗೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಹಾಗಾಗಿ ಇಬ್ಬರು ಮದುವೆಗೂ ಸಿದ್ಧತೆ ನಡೆಸಿದ್ದಾರೆ. ಜುಲೈನಲ್ಲೇ ಮದುವೆ ಎಂದು ಬೈಲ್ವಾನ್ ಹೇಳಿಕೆ ನೀಡಿದ್ದಾರೆ.
ಇವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು , ವಿವಾದಕ್ಕೂ ನಾಂದಿ ಹಾಡಿದೆ..
2004ರಲ್ಲಿ ಧನುಷ್ ಹಾಗೂ ಐಶ್ವರ್ಯ ಮದುವೆ ನಡೆದಿತ್ತು. 18 ವರ್ಷಗಳ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ಇಬ್ಬರು ಬ್ರೇಕ್ ಹಾಕಿ ದೂರಾಗಿದ್ದರು.. ಇನ್ನೂ ಈ ಇಬ್ಬರು ಮುಂದೆ ಮತ್ತೆ ಒಂದಾಗಬೇಕೆಂಬ ಕನಸು ಕಾಣುತ್ತಿರುವ ಅಭಿಮಾನಿಗಳು ಈ ನಟನ ಹೇಳಿಕೆಯಿಂದ ಶಾಕ್ ಆಗಿದ್ದಾರೆ..
Dhanush – Meena – the wedding of the two..??