ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ (Dhoni) ಇತ್ತೀಚೆಗೆ ಬಿಜೆಪಿ (BJP) ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರ ಅತ್ತೆಯನ್ನು ಭೇಟಿಯಾಗಿದ್ದಾರೆ.
ದೇಶದಲ್ಲಿ, ಒಂಬತ್ತರಿಂದ ತೊಂಬತ್ತು ವರ್ಷ ವಯಸ್ಸಿನವರೆಗಿನ ಎಲ್ಲರೂ ಧೋನಿಯನ್ನು ಮೆಚ್ಚುತ್ತಾರೆ. ಕಾರಣ ಧೋನಿ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯಸ್ಪರ್ಶಿಯಾಗಿದ್ದಾರೆ. ಚೆನ್ನೈನಲ್ಲಿ (Chennai) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಇನ್ನೂ ಹೆಚ್ಚಿನ ವಿಶೇಷ ಸ್ಥಾನಮಾನ ನೀಡಲಾಗಿದೆ.
BiggBoss Kannada 9 : ಪ್ರ್ಯಾಂಕ್ ಮಾಡಲು ಹೋದವರನ್ನೇ ಫೂಲ್ ಮಾಡಿದ ಬಿಗ್ ಬಾಸ್..!!
ಖುಷ್ಬೂ ಸುಂದರ್ ಅವರ ಅತ್ತೆಯನ್ನು ಭೇಟಿಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ ಹೀರೋಗಳನ್ನು ಸೃಷ್ಟಿಸಲಾಗುವುದಿಲ್ಲ, ಅವರು ಹುಟ್ಟುತ್ತಲೇ ಹೀರೋಗಳಾಗಿರುತ್ತಾರೆ. ಧೋನಿ ಅದನ್ನು ಸಾಬೀತು ಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. 88ರ ನನ್ನ ಅತ್ತೆಯನ್ನು ಭೇಟಿಯಾಗಿ ನೀವು ಅವರ ಜೀವನಕ್ಕೆ ಅನೇಕ ವರ್ಷಗಳ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಸೇರಿಸಿದ್ದೀರಿ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಈ ನಡುವೆ ಧೋನಿಯ ಕೊನೆಯ ಐಪಿಎಲ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಧೋನಿ ನಂತರ ಋತುರಾಜ್ ಗಾಯಕ್ವಾಡ್ ಸಿಎಸ್ಕೆ ನಾಯಕರಾಗಬಹುದು. ರವೀಂದ್ರ ಜಡೇಜಾ (Ravindra Jadeja) ಜೊತೆಗೆ ಬೆನ್ ಸ್ಟೋಕ್ಸ್ ಹೆಸರು ಕೂಡ ಕೇಳಿ ಬರುತ್ತಿದೆ.