Zoom Call ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ವಿಮಾನದಲ್ಲಿ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಬಿಡುಗಡೆ
ಭೂಮಿಯಿಂದ 37,000 ಅಡಿ ಎತ್ತರದಿಂದ ಪೋಸ್ಟರ್ ಬಿಡುಗಡೆ
ಸಿನಿಮಾಗಳ ಫಸ್ಟ್ ಲುಕ್ ಪೋಸ್ಟರ್ ಗಳನ್ನು ಸೆಲೆಬ್ರಿಟಿಗಳಿಂದ ಬಿಡುಗಡೆ ಮಾಡುವುದು ಇತ್ತೀಚೆಗೆ ನಡೆದುಕೊಂಡು ಬಂದಿದೆ. ಆದರೆ ಹೊಸಬರ ‘Zoom Call’ ಚಿತ್ರದ ಫಸ್ಟ್ ಲುಕ್ ನ್ನು ವಿಭಿನ್ನವಾಗಿ ಬಿಡುಗಡೆ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೊದಲ ಬಾರಿಗೆ ವಿಮಾನದಲ್ಲಿ ಬಿಡುಗಡೆ ಮಾಡಲಾಗಿದೆ. ಭೂಮಿಯಿಂದ 37,000 ಅಡಿ ಎತ್ತರದಲ್ಲಿ ಮೋಡದ ಮೇಲೆ ವಿಮಾನದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕ್ಷಣ ಅದ್ಭುತವಾಗಿತ್ತು ಎಂದು ನಿರ್ದೇಶಕ ಮಹೇಶ್ ಅನುಭವ ಹಂಚಿಕೊಂಡಿದ್ದಾರೆ.
Zoom Call ಚಿತ್ರ ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್ನಲ್ಲಿ ಬಂದಿವೆ. ಆದರೆ ಕನ್ನಡದಲ್ಲಿ ಜೂಮ್ ಕಾಲ್ ಮೊದಲ ಸಿನಿಮಾವಾಗಲಿದೆ ಎಂದು ನಿರ್ದೇಶಕ ಮಹೇಶ್ ಹೇಳಿದ್ದಾರೆ.
ಸದ್ಯಕ್ಕೆ Zoom Call ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. Zoom Call ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಾಣವನ್ನು ಸಹ ಮಹೇಶ್ ಹೆಚ್.ಎಂ ಮಾಡಿದ್ದಾರೆ.