ತಮಿಳಿನ ಹಿರಿಯ ನಟ ಶರತ್ ಕುಮಾರ್ ಹಾಗೂ ಅಶೋಕ್ ಸೆಲ್ವನ್ ಅಭಿನಯದ ಪೋರ್ ತೋಝಿಲ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಿಮರ್ಷಕರಿಂದಲೂ ಹಾಗೂ ಸಿನಿಮಾಪ್ರೇಮಿಗಳ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕ್ರೈಮ್ ಡ್ರಾಮಾ ಕಥಾಹಂದರ ಪೋರ್ ತೋಝಿಲ್ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವಂತೆ ಮಾಡ್ತಿದೆ. ಚೆನ್ಬೈ, ಹೈದ್ರಾಬಾದ್, ಕೊಯಮತ್ತೂರು ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣದ ಚಿತ್ರಮಂದಿರಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ತಮಿಳಿನ ಅತ್ಯುತ್ತಮ ಥ್ರಿಲ್ಲರ್ ಎಂಬ ಖ್ಯಾತಿಗೂ ಪಾತ್ರವಾಗಿರುವ ಪೋರ್ ತೋಝಿಲ್ ಸಿನಿಮಾಗೆ ಯುವ ಪ್ರತಿಭೆ ವಿಘ್ನೇಶ್ ರಾಜ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, E4 ಎಕ್ಸ್ ಪೆರಿಮೆಂಟ್ಸ್ ಮತ್ತು ಎಪ್ರಿಯಸ್ ಸ್ಟುಡಿಯೋ ಸಹಯೋಗದಲ್ಲಿ ಅಪ್ಲಾಸ್ ಎಂಟರ್ ಟೈನ್ಮೆಂಟ್ ಚಿತ್ರ ನಿರ್ಮಾಣ ಮಾಡಿದೆ. ಅಶೋಕ್ ಸೆಲ್ವನ್ ಸಿನಿ ಕರಿಯರ್ ನ ಅತ್ಯುತ್ತಮ ಚಿತ್ರ ಇದಾಗಿದ್ದು, ನಿಖಿಲಾ ವಿಮಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.