ಹಿಂದಿ ಕಿರುತೆರೆ ʼತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ Taarak Mehta Ka Ooltah Chashmah ಕಾರ್ಯಕ್ರಮದ ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
ಕಳೆದ 15 ವರ್ಷಗಳಿಂದ ʼತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದ ನಟಿಯೊಬ್ಬರು ಇತ್ತೀಚೆಗೆ ಧಾರಾವಾಹಿಯ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಮಾಡಿದ್ದರು. ನಟಿ ಪೊವಾಯಿ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಸೇರಿ ಮೂವರ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ʼತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿಯ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಅವರು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಆರೋಪವನ್ನು ಮಾಡಿ ಪೊಲೀಸರಿಗೆ ಲಿಖಿತವಾಗಿ ದೂರನ್ನು ನೀಡಿದ್ದಾರೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರಾಜೆಕ್ಟ್ ಹೆಡ್ ಸೊಹೈಲ್ ರಮಣಿ ಮತ್ತು ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧವೂ ದೂರನ್ನು ನೀಡಿದ್ದಾರೆ.
https://www.youtube.com/watch?v=aCM9XwLspQw
ಪೊಲೀಸರು ನಟಿಯ ದೂರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) IPC ಸೆಕ್ಷನ್ 354 ಮತ್ತು 509 (ಮಹಿಳೆಯೊಬ್ಬಳ ಮೇಲಿನ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ) ಅಡಿಯಲ್ಲಿ ಪೊವಾಯಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದುವರೆಗೆ ನಿರ್ಮಾಪಕನ ಬಂಧನವಾಗಿಲ್ಲ ಎಂದು ವರದಿ ತಿಳಿಸಿದೆ.