ಬೆಂಗಳೂರ: ನಾಲ್ಕದಿನಗಳ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ Narendra Modi ಅವರ ಈಗಾಗಲೇ ಅಮೆರಿಕಾಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿಗಾಗಿ ಅಧ್ಯಕ್ಷ ಜೋ ಬೈಡನ್ ದಂಪತಿ ಔತಣ ಕೂಟ ಸೇರಿದಂತೆ ವಿವಿಧ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ಹಾಗೂ ಬೆಂಗಳೂರನ ಮೂಲದ ಅಂತಾರಾಷ್ಟ್ರೀಯ ಸಂಗೀತ ಸಂಯೋಜಕ ರಿಕಿ ಕೇಜ್ Ricky Kej ಅವರಿಗೂ ಆಹ್ವಾನ್ ಬಂದಿದೆ. ಈ ಬಗ್ಗೆ ಸ್ವತಃ ರಿಕಿ ಕೇಜ್ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ವಟರ್ ನಲ್ಲಿ ಬರೆದುಕೊಂಡಿದ್ದಾರೆ. ರಿಕೆ ಕೇಜ್ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ “ವಂಡರ್ಸ್ ಆಫ್ ಲೈಪ್” ಹೆಸರಿನಲ್ಲಿ ಸಂಯೋಜಿಸಲಾದ ವಿಶೇಷ ಗೀತೆಯನ್ನು ಜೂನ್ 21ರಂದು ಬೆಳಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ) ಬಿಡುಗಡೆಯಾಗಲಿದೆ. ರಿಕಿ ಕೇಜ್ ಕೇವಲ ಸಂಗೀತ ಕ್ಷೇತ್ರದಲ್ಲಿ ಅಲ್ಲದೆ ಸಾಮಾಜಿಕ ಕೆಲಸದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರು “ಮರಭೂಮಿಯನ್ನು ಎದುರಿಸಲು ಯುನೈಟೆಡ್ ನೇಷನ್ಸ್ ಕನ್ವೆನ್ಶನ್” (UNCCD) ಜತೆ ಕೈಜೋಡಿಸಿ #HerLandCampaign ಆರಂಭಿಸಿದ್ದಾರೆ. ಮಹಿಳೆಯರು ಭೂ ಒಡೆತನದ ಹಕ್ಕು ಹೊಂದಬೇಕು ಎಂಬುದು ಇದರ ಆಶಯವಾಗಿದೆ.