ಕೊರಿಯಾದ ಖ್ಯಾತ ಹಾಗೂ ಯುವ ಗಾಯಕ ಸುಂಗ್ ಬಾಂಗ್ Sung-bong ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೊರ ಬಿದ್ದಿದೆ. 2011ರಲ್ಲಿ ಕೊರಿಯಾಸ್ ಗಾಟ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ಚೋಯ್ ಸುಂಗ್- ಬಾಂಗ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಯುವ ಗಾಯಕನಿಗೆ 33 ವರ್ಷ ವಯಸ್ಸಾಗಿತ್ತು. ಸಿಯೋಲ್ ಪೊಲೀಸರ ಮಾಹಿತಿಯಂತೆ ಮಂಗಳವಾರ ದಕ್ಷಿಣ ಸಿಯೋಲ್ ನ ಯೊಕ್ಸಾಮ್ ಡಾಂಗ್ ಜಿಲ್ಲೆಯ ಅವರ ಮನೆಯಲ್ಲಿ ಚೋಯ್ ಶವವಾಗಿ ಪತ್ತೆಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿಯನ್ನು ಕೂಡ ಇವರು ಗಳಿಸಿದ್ದರು. ಆದರೆ, ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿ ಸಾಕಷ್ಟು ಮುಜಗುರಕ್ಕೆ ಕೂಡ ಇವರು ಈಡಾಗಿದ್ದರು.
ಚೋಯ್ ಸುಂಗ್ ಬಾಂಗ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿ ಹಲವಾರು ರೀತಿಯಲ್ಲಿ ಹಣ ಸಂಗ್ರಹಿಸಿ, ಜನರ ಆಕ್ರೋಶಕ್ಕೆ ಈಡಾಗಿದ್ದರು. ಆನಂತರ ಅವರು ತಮ್ಮ ಹಣಕಾಸಿನ ತೊಂದರೆಗಳನ್ನು ಪ್ರಸ್ತಾಪಿಸಿದ್ದರು. ಅವರು ಇತ್ತೀಚಿನ ಆಲ್ಬಂಗಾಗಿ ಹಣದ ಅಗತ್ಯವಿದೆ ಎಂದು ಹೇಳಿದ್ದರು. ಇತ್ತೀಚಿನ ಆಲ್ಬಂಗಾಗಿ ಹಣದ ಅಗತ್ಯವಿದೆ ಎಂದು ಹೇಳಿದ್ದರು. ನಂತರು ಅವರು ಮಾಡಿರುವುದು ಪ್ರಮಾದ ಎಂದು ಗೊತ್ತಾಗುತ್ತಿದ್ದಂತೆ ಚೋಯ್ ಕೂಡ ತಪ್ಪು ಒಪ್ಪಿಕೊಂಡು ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ನಾನು ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿಲ್ಲ ಎಂದು ತಪ್ಪು ಒಪ್ಪಿಕೊಂಡಿದ್ದರು.
ಆದರೆ, ಈಗ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಯೂಟ್ಯೂಬ್ ನಲ್ಲಿ ಆತ್ಮಹತ್ಯೆ ಸೂಚಿಸುವ ಟಿಪ್ಪಣಿಯನ್ನು ಅಪ್ಲೋಡ್ ಮಾಡಿದ್ದಾರೆ. ನನ್ನ ಮೂರ್ಖತನದ ತಪ್ಪಿನಿಂದ ನೊಂದವರಿಗೆ ಪ್ರಾಮಾಣಿಕ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ
ಚೋಯ್ ಸುಂಗ್-ಬಾಂಗ್, ಕೊರಿಯನ್ ಲೇಬಲ್ ಬಾಂಗ್ ಬಾಂಗ್ ಕಂಪನಿಯೊಂದಿಗೆ ರೆಕಾರ್ಡಿಂಗ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವರು ಸಾಕಷ್ಟು ಖ್ಯಾತಿ ಗಳಿಸಿದ್ದು,