Kantara : ಸಂದರ್ಶನದ ವೇಳೆಯೇ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ನಿರೂಪಕ – ನೀವು ನನಗೆ ಪ್ರೇಯಸಿಗಿಂತ ಹೆಚ್ಚೆಂದ ಸೂರಜ್..!!!
ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಇದೀಗ ರಿಲೀಸ್ ಮಾಡಲಾಗ್ತಿದ್ದು .
ಇಂದು ( ಅಕ್ಟೋಬರ್ 14) ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.. ಹಿಂದಿ ಡಬ್ಬಿಂಗ್ ವರ್ಷನ್ ಸುಮಾರು 2500 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ.. ಈ ಸಿನಿಮಾದ ಸಂಬಂಧ ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ನಿರೂಪಕ ರಿಷಬ್ ಕಾಲಿಗೆ ಬಿದ್ದಿದ್ದು ಈ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಹೌದು..! ಹೊಂಬಾಳೆ ಫಿಲಮ್ಸ್ ನಿರ್ಮಿಸಿ , ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದೆ.. ಅಲ್ಲದೇ ಪರಭಾಷಾಭಿಮಾನಿಗಳು ಸಿನಿಮಾಗೆ ಫಿದಾ ಆಗಿದ್ದಾರೆ.. ಸ್ಟಾರ್ ಗಳು ಸಹ ಕಾಂತಾರವನ್ನ ಹೊಗಳುತ್ತಿದ್ದಾರೆ..
ಇತ್ತೀಚೆಗೆ ತೆಲುಗು ಪತ್ರಿಕಾಗೋಷ್ಠಿ ವೇಳೆ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಕಪ ಅಲ್ಲು ಅರವಿಂದ್ ಈ ಸಿನಿಮಾವನ್ನ ಹಾಡಿ ಹೊಗಳಿದ್ದರು..
ಇದೀಗ ಸಂದರ್ಶನವೊಂದ್ರಲ್ಲಿ ರಿಷಬ್ ಶೆಟ್ಟಿ ಕಾಲಿಗೆ ನಿರೂಪಕ ಬಿದ್ದಿರುವುದು ಸಖತ್ ವೈರಲ್ ಆಗ್ತಿದೆ. ಖ್ಯಾತ ಯೂಟ್ಯೂಬರ್ , ಸಿನಿಮಾ ವಿಮರ್ಶಕ 24 ವರ್ಷದ ಸೂರಜ್ ಕುಮಾರ್ ಎಂಬಾತ ರಿಷಬ್ ಅವರ ಕಾಲಿಗೆ ಬಿದ್ದಿದ್ದಾನೆ.. ಈತನಿಗೆ ಸುಮಾರು 6 ಲಕ್ಷ ಸಬ್ಸ್ ಸ್ಕ್ರೈಬರ್ಸ್ ಇದ್ದು ,. ಈತ ಸಿನಿಮಾಗಳನ್ನ ವಿಮರ್ಶೆ ಮಾಡುವ ಶೈಲಿ , ತಾರೆಯರನ್ನ ಸಂದರ್ಶಿಸುವ ಶೈಲಿಗೆ ಜನ ಫಿದಾ ಆಗಿದ್ದಾರೆ..
ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ಅವರ ಸಂದರ್ಶನವನ್ನು ಆರಂಭ ಮಾಡುವುದಕ್ಕೂ ಮುನ್ನ ರಿಷಬ್ ಶೆಟ್ಟಿ ಅವರನ್ನು ಎದ್ದೇಳಿ ಎಂದು ಅಪ್ಪುಗೆ ನೀಡಿ , ನಾನು ಅನೇಕ ಚಿತ್ರಗಳನ್ನು ನೋಡಿದ್ದೇನೆ ಆದರೆ ಈ ಚಿತ್ರದಲ್ಲಿ ನಿಮ್ಮ ನಟನೆ ಮಾತ್ರ ಅತ್ಯದ್ಭುತ ಎಂದು ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿದ್ದಾರೆ.. ಅಷ್ಟೇ ಅಲ್ಲ ನಾನು ನಿಮ್ಮನ್ನು ನನ್ನ ಪ್ರೇಯಸಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.. ಸದ್ಯ ಸೂರಜ್ ಕುಮಾರ್ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿರುವ ವಿಡಿಯೋ ಮಾತ್ರ ಭಾರೀ ವೈರಲ್ ಆಗ್ತಿದೆ..
Kantara : ಹಿಂದಿಯಲ್ಲಿ KGF 2 ಗಿಂತಲೂ ಹೆಚ್ಚು ರೇಟಿಂಗ್ ಪಡೆದ ಕಾಂತಾರ..!!