Ranveer Singh : ನಗ್ನ ಫೋಟೋ ಶೂಟ್ ಪ್ರಕರಣ – ವಿಚಾರಣೆಗೆ ಹಾಜರಾಗಿದ್ದ ನಟ..!!
ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ನಟ ರಣವೀರ್ ಪೇಪರ್ ಮ್ಯಾಗಜೀನ್ ಗಾಗಿ ನಗ್ನವಾಗಿ ಫೋಟೋ ಶೂಟ್ಗಾಗಿ ಬೆತ್ತಲೆಯಾಗಿ ಪೋಸ್ ನೀಡಿದ್ದರು.. ಅವರ ಫೋಟೋ ಸೆನ್ಷೇಷನ್ ಸೃಷ್ಟಿಸಿತ್ತು.. ಅನೇಕರು ವಿರೋಧಿಸಿದ್ರೆ , ಅನೇಕರು ಬೆಂಬಲಿಸಿದ್ರು ಸಹ..
ಆದ್ರೆ ಹಲವರು ರಣವೀರ್ ನಗ್ನಾವತಾರ ಕಂಡು ಗರಂ ಆಗಿದ್ದರು.. ವಿರೋಧಿಸಿ ಆಕ್ರೋಶ ಹೊರಹಾಕಿದ್ದರು.. ದೂರು ಕೂಡ ದಾಖಲಿಸಿದ್ದರು.. ಇದೇ ಪ್ರಕರಣ ಸಂಬಂಧ ರಣವೀರ್ ಸಿಂಗ್ ಆಗಸ್ಟ್ 29 ರ ಬೆಳಿಗ್ಗೆ 6.50ಕ್ಕೆ ಮುಂಬೈನ ಚೆಂಬೂರ್ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ.
ಪೊಲೀಸರು ರಣವೀರ್ ಅವರನ್ನ ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು. ನಟ ರಣ್ವೀರ್ ತಮ್ಮ ಕಾನೂನು ತಂಡದೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು, ನಾವು ಅವರಿಗೆ 10 ಪ್ರಶ್ನೆಗಳನ್ನು ಕೇಳಿದ್ದೇವೆ ಎಂದು ಇನ್ಸ್ಪೆಕ್ಟರ್ ಜಯಕುಮಾರ್ ಸೂರ್ಯವಂಶಿ ಹೇಳಿದ್ದಾರೆ,
ಮಾಧ್ಯಮಗಳು ಮತ್ತು ಜನಸಂದಣಿಯನ್ನು ತಪ್ಪಿಸಲು, ರಣವೀರ್ ಎರಡು ದಿನಗಳ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುವ ಮೂಲಕ ವಿಚಾರಣೆಗಾಗಿ ಇಂದು ಬೆಳಿಗ್ಗೆ ಸಮಯವನ್ನು ನಿಗದಿಪಡಿಸಿಕೊಂಡಿದ್ದರು.
ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ರಣವೀರ್ ಸಿಂಗ್, “ಈ ರೀತಿಯ ಫೋಟೋಶೂಟ್ ನನಗೆ ತೊಂದರೆ ಉಂಟುಮಾಡುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಯಾರ ಭಾವನೆಗಳಿಗೂ ಧಕ್ಕೆ ತರಲು ಉದ್ದೇಶಿಸಿಲ್ಲ. ನಾನು ಅದನ್ನು ಸಾಮಾನ್ಯ ಫೋಟೋಶೂಟ್ ನಂತೆ ಮಾಡಿದ್ದೇನೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರ ಕುರಿತ ಪ್ರಶ್ನೆಗೆ ಉತ್ತರಿಸದ ರಣವೀರ್ “ಫೊಟೋ ಶೂಟರ್ಗಳ ಅಜೆಂಡಾ ಸಾಧ್ಯವಾದಷ್ಟು ಜನರಿಗೆ ತಲುಪಬೇಕು ಎಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಾನು ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇನೆ. ನಾನು ಯಾರನ್ನಾದರೂ ನೋಯಿಸಲು ಪೋಸ್ಟ್ ಮಾಡಿಲ್ಲ. ಹೆಚ್ಚಿನ ತನಿಖೆಗೆ ಸಹಕಾರ ನೀಡುವ ಕುರಿತು ಮಾತನಾಡಿದ್ದಾರೆ.
ಜುಲೈ 22 ರಂದು ಪೇಪರ್ ಮ್ಯಾಗಜೀನ್ಗಾಗಿ ರಣವೀರ್ ನಗ್ನ ಫೋಟೋಶೂಟ್ ಮಾಡಿದ್ದರು. ಅದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ನಂತರ ಮುಂಬೈನ ಎನ್ಜಿಒ ರಣವೀರ್ ವಿರುದ್ಧ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿತ್ತು. ರಣವೀರ್ ತನ್ನ ನಗ್ನ ಫೋಟೋಗಳಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಮತ್ತು ಅವಮಾನ ಮಾಡಿದ್ದಾರೆ ಎಂದು ಎನ್ಜಿಒ ಹೇಳಿತ್ತು. ಹಾಗಾಗಿ ಅವರ ಫೋಟೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಿಂದ ತೆಗೆದುಹಾಕಬೇಕು ಮತ್ತು ಅವರ ಬಂಧನಕ್ಕೂ ಒತ್ತಾಯಿಸಿದರು.
ರಣವೀರ್ ವಿರುದ್ಧ ಐಪಿಸಿ ಸೆಕ್ಷನ್ 509, 292, 293, ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಾದ ನಂತರ ಮುಂಬೈ ಪೊಲೀಸರು 48 ಗಂಟೆಗಳ ಕಾಲಾವಕಾಶ ಕೋರಿದ್ದರು. ಇದಾದ ಬಳಿಕ ರಣವೀರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 292 ರ ಅಡಿಯಲ್ಲಿ 5 ವರ್ಷ ಮತ್ತು ಸೆಕ್ಷನ್ 293 ರ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. ಐಟಿ ಕಾಯ್ದೆ 67A ಅಡಿಯಲ್ಲಿ ರಣವೀರ್ಗೆ 5 ವರ್ಷಗಳ ಶಿಕ್ಷೆಯನ್ನು ಸಹ ವಿಧಿಸಬಹುದು.