Ramya : ನಾಳೆ 11:15 ಕ್ಕೆ ಸಿಹಿ ಸುದ್ದಿ ಕೊಡ್ತಿದ್ದಾರೆ ಮೋಹಕ ತಾರೆ..!! ಸಿನಿಮಾ ಬಗ್ಗೆನಾ..?? ಮದುವೆನಾ..?? ರಾಜಕೀಯಾನಾ..??
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಿನಿಮಾರಂಗದಿಂದ ದೂರಾಗಿ ಸುಮಾರು ವರ್ಷಗಳೇ ಕಳೆದ್ರೂ ಈಗಲೂ ಅವರ ಕ್ರೇಜ್ ಕಡಿಮೆಯಾಗಿಲ್ಲ.. ಅವರ ಕಮ್ ಬ್ಯಾಕ್ ಗಾಘಿ ಅಭಿಮಾನಿಗಳು ಕಾಯ್ತಿದ್ದಾರೆ.. ರಮ್ಯಾ ಸಹ ಮತ್ತೆ ಸ್ಯಾಂಡಲ್ ವುಡ್ ಗೆ ಶೀಘ್ರವೇ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗ್ತಿದೆ… ಅವರ ಕಮ್ ಬ್ಯಾಕ್ ಸಿನಿಮಾಗೆ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ ರಮ್ಯಾ.. ಇದೀಗ ಅಭಿಮಾನಿಗಳ ಎಕ್ಸೈಟ್ ಮೆಂಟ್ ಹೆಚ್ಚಿಸುವಂತಹ ಪೋಸ್ಟ್ ಹಾಕಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ..
ಪೋಸ್ಟರ್ನಲ್ಲಿ ನಟಿ ರಮ್ಯಾ ಸಿಹಿ ಸುದ್ದಿ ಕೊಡ್ತೀನಿ ಎಂದು ಬರೆದುಕೊಂಡಿದ್ದು ಅಲ್ದೇ ಇದು ಅಧಿಕೃತ ಅಂತ ಕೂಡ ಹಾಕಿದ್ದಾರೆ.. ಅಭಿಮಾನಿಗಳಂತೂ ಈ ಪೋಸ್ಟರ್ ಕೂಡಿ ಕುತೂಹಲದಲ್ಲಿ ಕಾಯ್ತಿದ್ದಾರೆ.. ಕಲೆವರು ಮದ್ವೆ ಸುದ್ದಿನ , ಸಿನಿಮಾ ಸುದ್ದಿನ , ರಾಜಕೀಯದ ಅಪ್ ಡೇಟಾ ಅನ್ನೋ ಚರ್ಚೆಯಲ್ಲಿ ತೊಡಗಿದ್ದಾರೆ..
ರಮ್ಯಾ ಟ್ವೀಟ್ ನಲ್ಲಿ ಏನಿದೆ..??
” ಇಷ್ಟು ದಿನ ನಾನು ಸಮಯ ತೆಗೆದುಕೊಂಡಿದ್ದು ಸಾಕು ಅನಿಸುತ್ತೆ ಅಲ್ಲವಾ? ನಾನು ನಿಮ್ಮೊಂದಿಗೆ ನಾಳೆ ಬೆಳಗ್ಗೆ 11:15ಕ್ಕೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಾನು ಕಾತರಳಾಗಿದ್ದೇನೆ. ಇದು ಅಧಿಕೃತ.” ಎಂದು ಬರೆದುಕೊಂಡಿದ್ದಾರೆ.
— Ramya/Divya Spandana (@divyaspandana) August 30, 2022