Nabha Natesh : ದುಬಾರಿ ಸಂಭಾವನೆ ಕೇಳಿ ತಪ್ಪು ಮಾಡ್ಬಿಟ್ರಾ ಪಟ್ ಪಟ್ ಪಟಾಕಿ ಪೋರಿ ನಭಾ..!!! ಕಡಿಮೆಯಾಯ್ತಾ ಆಫರ್ ಗಳು..??
ಪಟ್ ಪಟ್ ಪಟಾಕಿ ಪೋರಿ ,,, ವಜ್ರಕಾಯದ ಬಾಯ್ಬಡಿಕಿ ,,, ಟಾಲಿವುಡ್ ನಲ್ಲಿ ಮಿಂಚುತ್ತಿರುವ ಕರ್ನಾಟಕದ ಚೆಲುವೆ ನಭಾ ನಟೇಶ್ ಅವರಿಗೆ ಇದೀಗ ಫರ್ ಗಳು ಸಿಗುತ್ತಿಲ್ಲ ನ್ನಲಾಗ್ತಿದೆ.. ಇದಕ್ಕೆ ಕಾರಣ ಅವರು ದುಬಾರಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದು ಎನ್ನಲಾಗ್ತಿದೆ..
ಶಿವರಾಜ್ ಕುಮಾರ್ ಜೊತೆಗೆ ವಜ್ರಕಾಯದಲ್ಲಿ ನಾಯಕಿಯಾಗಿ ಮಿಂಚಿದ್ದರು.. ಬಳಿಕ ತೆಲುಗು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು.. ಇಸ್ಮಾರ್ಟ್ ಶಂಕರ್ ಚಿತ್ರದ ಯಶಸ್ಸಿನ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದರು.. ಆದ್ರೆ ಸಂಭಾವನೆ ದುಬಾರಿ ಮಾಡಿಕೊಂಡಿದ್ದೇ ಅವರಿಗೆ ಮುಳವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ..
ಇದೀಗ ನಭಾಗೆ ಆಫರ್ ಗಳಿಲ್ಲದೆ ಖಾಲಿ ಕುಳಿತಿದ್ದಾರೆ ಎನ್ನಲಾಗ್ತಿದೆ.. ಇಸ್ಮಾರ್ಟ್ ಶಂಕರ್ ನಂತರ ನಭಾ ನಟನೆಯ ಸಿನಿಮಾಗಳು ಫ್ಲಾಪ್ ಆಗಿದ್ದೇ ಹೆಚ್ಚು.. ಇದೀಗ ನಭಾಗೆ ಅವಕಾಶಗಳು ಸಿಗದಂತಾಗಿದೆ.. ನಭಾಗೆ ಅವಕಾಶ ಕೊಡಲು ನಿರ್ಮಾಕರು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ..