Rishab Shetty : ಆಗ.. ಒಂದು ಶೋಗಾಗಿ ಪರದಾಟ.. ಇಂದು ಶೋಗಳ ಸಂಖ್ಯೆ ಹೆಚ್ಚಾದ್ರೂ ಟಿಕೆಟ್ ಸಿಗುತ್ತಿಲ್ಲ..!!
ಪ್ರತಿಯೊಬ್ಬರಿಗೂ ಜೀವನದಲ್ಲಿ , ವೃತ್ತಿ ಜೀವನದಲ್ಲಿ ಏರಿಳಿತಗಳು ಸಹಜ..
ಸಿನಿಮಾರಂಗದಲ್ಲೂ ಸಹ..
ಆರಂಭದಲ್ಲಿ ಸಾಕಷ್ಟು ಸ್ಟ್ರಗಲ್ ಮಾಡಿಯೇ ಸ್ಟಾರ್ ಗಳಾಗುವುದು..
ಈ ಪೈಕಿ ಒಬ್ಬರು ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ…
ಒಳ್ಳೆ ಕಂಟೆಂಟ್ ಬೇಸ್ಡ್ ಸಿನಿಮಾ ಮಾಡೋದು ರಿಷಬ್ ಶೆಟ್ಟಿ ಟ್ಯಾಲೆಂಟ್..

ಅಂದ್ಹಾಗೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ.. ರಿಲೀಸ್ ಆದ 5 ದಿನಗಳಲ್ಲಿಯೇ ಭರ್ಜರಿ ಕಲೆಕ್ಷನ್ ಮಾಡಿದೆ.. ರಾಜ್ಯದಲ್ಲಿ ಪೊನ್ನಿಯನ್ ಸೆಲ್ವನ್ ಕಾಂತಾರಾ ಮುಂದೆ ಡಲ್ ಹೊಡೆದಿದೆ..
ಕಾಂತಾರಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಸಿನಿಮಾದ ಟಿಕೆಟ್ ಸಿಗೋದೆ ಕಷ್ಟವಾಗ್ತಿದೆ.. ಮಲ್ಟಿಪ್ಲೆಕ್ಸ್ , ಥಿಯೇಟರ್ ಗಳಲ್ಲೂ ಎಲ್ಲಾ ಶೋಗಳು ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದ್ದು , ಜನರು ಟಿಕೆಟ್ ಸಿಗದೇ ಬೇಸರಗೊಂಡಿದ್ದಾರೆ.. ಅಷ್ಟರ ಮಟ್ಟಿಗೆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ…
ಎಲ್ಲಿ ನೋಡಿದ್ರೂ ಕಾಂತಾರ ಕ್ರೇಜ್ ಆಗಿದೆ.. ಸಿನಿಮಾದ ಸಕ್ಸಸ್ ನೋಡಿ ಸಿನಿಮಾದ ಶೋಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆಯಾದ್ರೂ ಟಿಕೆಟ್ ಗಳು ಸೋಲ್ಡ್ ಔಟ್ ಆಗ್ತಿದೆ..
ಅಂದ್ಹಾಗೆ ರಿಷಬ್ ಶೆಟ್ಟಿ ಅವರ ಶ್ರಮ ಇಲ್ಲಿ ಸಾಕಷ್ಟಿದೆ.. ಈ ಹಿಂದೆ ಸಾಕಷ್ಟು ಏಳು ಬೀಳುಗಳನ್ನ ನೋಡಿ ಅವಮಾನಗಳನ್ನೂ ಸಹಿಸಿಕೊಂಡಿದ್ದಾರೆ ಅಂದ್ರೆ ತಪ್ಪಾಗಲಾರದು..
7 ವರ್ಷಗಳ ಹಿಂದೆ ಅಂದ್ರೆ 2016 ರಲ್ಲಿ ರಿಕ್ಕಿ ಸಿನಿಮಾ ರಿಲೀಸ್ ಆಗಿತ್ತು.. ರಕ್ಷಿತ್ ಶೆಟ್ಟಿ ನಟಿಸಿದ್ದ ಈ ಸಿನಿಮಾಗೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರು..
ಮಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿ ತಮ್ಮ ಸಿನಿಮಾದ ಒಂದೇ ಒಂದು ಶೂ ಪ್ರದರ್ಶನ ಕಾಣಲು ಪರದಾಡಿದ್ದರಂತೆ ರಿಷಬ್ ಶೆಟ್ಟಿ.. ಇಂದು ಅದೇ ಮಲ್ಟಿಪ್ಲೆಕ್ಸ್ ನಲ್ಲಿ ಕಾಂತಾರ ಸಿನಿಮಾದ ಎಲ್ಲಾ ಶೋಗಳೂ ಹೌಸ್ಫುಲ್ ಆಗಿವೆ.
2016 ಜನವರಿ 22 ರಂದು ರಿಷಬ್ ಶೆಟ್ಟಿ ನಿರ್ದೇಶನದ ರಿಕ್ಕಿ ಚಿತ್ರ ಬಿಡುಗಡೆಯಾಗಿತ್ತು. ಇದು ರುಷಬ್ ಶೆಟ್ಟಿ ಅವರ ನಿರ್ದೇಶನದ ಮೊದಲ ಸಿನಿಮಾವಾಗಿತ್ತು.. ಸಿನಿಮಾಗೆ ಹರಿಪ್ರಿಯಾ ನಾಯಕಿಯಾಗಿದ್ದರು.
ಆದ್ರೆ ಈ ಸಿನಿಮಾ ಅಂದುಕೊಂಡಮಟ್ಟಿಗೆ ಸಕ್ಸಸ್ ಕಾಣಲಿಲ್ಲ.. ಆಗ ಮಲ್ಟಿಪ್ಲೆಕ್ಸ್ ನಲ್ಲಿ ಶೋ ಪಡೆಯಲು ರಿಷಬ್ ಶೆಟ್ಟಿ ಸಾಕಷ್ಟು ಪರದಾಟವನ್ನೂ ನಡೆಸಿದ್ದರು.. ಆಗ ರಿಷಬ್ ಶೆಟ್ಟಿ ಒಂದು ಪೋಸ್ಟ್ ಹಾಕಿದ್ದರು.. 7 ವರ್ಷಗಳ ಹಿಂದೆ ರಿಷಬ್ ಶೆಟ್ಟಿ ಹಾಕಿದ್ದ ಪೋಸ್ಟ್ ಈಗ ಭಾರೀ ವೈರಲ್ ಆಗ್ತಿದೆ..
ರಿಕ್ಕಿ ಸಿನಿಮಾ ರಿಲೀಸ್ ಆದ ಎರಡೇ ವಾರಕ್ಕೆ ಶೋ ಕೊಡಲು ಮಂಗಳೂರಿನ ಬಿಗ್ ಸಿನಿಮಾಸ್ ನಿರಾಕರಿಸಿದ್ದರು. ಆಗ ರಿಷಬ್ ಶೆಟ್ಟಿ ಸಾಕಷ್ಟು ಹರಸಾಹಸ ಪಟ್ಟಿದ್ದರು.. ಅವರಿವರನ್ನು ಬೇಡಿ ಕಷ್ಟ ಪಟ್ಟು ಒಂದೇ ಒಂದು ಶೋ ಪ್ರದರ್ಶನಕ್ಕೆ ಅನುಮತಿ ಪಡೆದಿದ್ದರು..
ಆಗ ರಿಷಬ್ ಶೆಟ್ಟಿ ಪೋಸ್ಟ್ ಒಂದನ್ನ ಹಾಕಿದ್ದರು.. “ಅಂತು ಇಂತು ಅವರಿವರ ಕೈ-ಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್ ನಲ್ಲಿ ನಾಳೆಯಿಂದ ಸಂಜೆ 7 PM ಶೋ ಸಿಕ್ಕಿತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್ ಕಾಯ್ದಿರಿಸಿ. ಧನ್ಯವಾದಗಳು” ಎಂದು ಬರೆದುಕೊಂಡಿದ್ದರು.
ಇದೀಗ ಮಂಗಳೂರಿನ ಅದೇ ಮಲ್ಟಿಪ್ಲೆಕ್ಸ್ ನಲ್ಲಿಯೇ ಕಾಂತಾರ ಸಿನಿಮಾದ 10 ಕ್ಕೂ ಅಧಿಕ ಶೋಗಳು ಇದ್ದು , ಎಲ್ಲವೂ ಹೌಸ್ ಫುಲ್ ಆಗಿ ಪ್ರದರ್ಶನ ಕಾಣ್ತಿದೆ.. ಸಿನಿಮಾದ ಟಿಕೆಟ್ ಗಳು ಸಿಗದೇ ಜನರು ಪರದಾಡುವಂತಾಗಿದೆ..
ಈ ಬಗ್ಗೆ ರಿಷಬ್ ಶೆಟ್ಟಿ ಹಳೆಯ ಪೋಸ್ಟ್ ನೆನಪಿಸಿ ನೆಟ್ಟಿಗರೊಬ್ಬರು ಪೋಸ್ಟ್ ಹಾಕಿದ್ದು ಅಂದು ಶೋ ಸಿಗದೇ ಪರದಾಡಿದ್ದರು… ಇಂದು ಶೋಗಳ ಸಂಖ್ಯೆ ಹೆಚ್ಚಾದ್ರೂ ಟಿಕೆಟ್ ಸಿಗದೇ ಪರದಾಡುವಂತಾಗಿದೆ..ಕಾಲಾಯ ತಸ್ಮೈ ನಮಃ ದು ಬರೆದುಕೊಂಡಿದ್ದಾರೆ.. ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಸಿದ್ದು, ಒಂದೊಳ್ಳೆ ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.
ಒಟ್ಟಾರೆ ಈ ಪೋಸ್ಟ್ ಭಾರೀ ವೈರಲ್ ಆಗ್ತಿದ್ದು , ರಿಷಬ್ ಶೆಟ್ಟಿಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ..