ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವರ್ಷ.
ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬಂತೆ ಅವರು ನಮ್ಮ ನಡುವೆ ಇಲ್ಲದಿದ್ದರೂ ರಾಜ್ಯದ ಪ್ರತಿಯೊಬ್ಬರ ಮನ ಮನೆಯಲ್ಲೂ ಅಪ್ಪು ಇನ್ನೂ ಜೀವಂತವಾಗಿದ್ದಾರೆ, ಇರುತ್ತಾರೆ..
ನೋವು, ಕಣ್ಣೀರು, ಆಕ್ರಂದನದ ನಡುವೆ ಇಂದು ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ.
ಕಂಠೀರವ ಸ್ಟುಡಿಯೋದಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಅಪ್ಪು ಸಮಾಧಿಗೆ ಬಗೆ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ರಾತ್ರಿ ಇಡೀ ಜಾಗರಣೆ, ಗೀತನಮನ ಅರ್ಪಿಸಲಾಗಿದೆ.
ಮತ್ತೊಂದು ಕಡೆ ಅನ್ನಸಂತರ್ಪಣೆ ರಕ್ತದಾನ ಶಿಬಿರಕ್ಕೆ ಸಕಲ ಸಿದ್ಧತೆ ನಡೆದಿದೆ.