Beast : ಥಿಯೇಟರ್ ಗಳಲ್ಲಿ KGF 2 ಎದುರಿಗೆ ಮಂಕಾಗಿದ್ದ Beast ಎದುರು ರೇಟಿಂಗ್ ನಲ್ಲಿ ಸೋತ ‘ವಿಕ್ರಂ’
KGF 2 ಮಾಡಿದ್ದ ಸೌಂಡ್ ಅಷ್ಟಿಷ್ಟಲ್ಲಾ ದಾಖಲೆಗಳ ಮೇಲೆ ದಾಖಲೆ ಬರೆದು ಎಷ್ಟೋ ಸಿನಿಮಾಗಳಿಗೆ ಅದ್ರಲ್ಲೂ ಪರ ಭಾಷಾ ಸಿನಿಮಾಗಳ ಮುಂದೆ ಅಬ್ಬರಿಸಿ ಬೊಬ್ಬಿರಿದು ಬಾಕ್ಸ್ ಆಪೀಸ್ ನಲ್ಲಿ ಧೂಳೆಬ್ಬಿಸಿತ್ತು.. ಇದೇ ಸಮಯದಲ್ಲೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಕೂಡ ರಿಲೀಸ್ ಆಗಿತ್ತು.. ಆದ್ರೆ ಹೇಳಿಕೊಳ್ಳುವಂತ ಯಶಸ್ಸು ಸಿಗಲಿಲ್ಲ..
ಆದ್ರೆ ಥಿಯೇಟರ್ ಗಳಲ್ಲಿ ಸಿನಿಮಾ ಅಬ್ಬರಿಸದೇ ಹೋದ್ರೂ ಇದೀಗ ಸೂಪರ್ ಹಿಟ್ ಸಿನಿಮಾ ಕಮಲ್ ಹಾಸನ್ , ಸೂರ್ಯ ಸೇರಿದಂತೆ ಹಲವು ಮಲ್ಟಿಸ್ಟಾರ್ ಗಳಿದ್ದ ವಿಕ್ರಂ ಸಿನಿಮಾ ಎದುರಿಗೆ ಆರ್ಭಟಿಸುತ್ತಿದೆ..
ವಿಶ್ವದಾದ್ಯಂತ 426 ಕೋಟಿ ರೂ. ಕಲೆಕ್ಷನ್ ಮಾಡಿದ್ದ ವಿಕ್ರಂ ಸಿನಿಮಾದ ರೇಟಿಂಗ್ ಟಿವಿಯಲ್ಲಿ ಕುಸಿದಿದೆ.. ಆದ್ರೆ ವಿಕ್ರಂ ಎದುರು ಬೀಸ್ಟ್ ಸಖತ್ ೊಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ..
ದೀಪಾವಳಿ ಹಬ್ಬಕ್ಕೆ ಬೀಸ್ಟ್ ಹಾಗೂ ವಿಕ್ರಂ ಸಿನಿಮಾಗಳು ಟಿವಿಯಲ್ಲಿ ಪ್ರೀಮಿಯರ್ ಆಗಿದ್ದವು. ಈಗದರ TRP ರೇಟಿಂಗ್ ಮಾಹಿತಿ ಸಿಕ್ಕಿದೆ. ಬೀಸ್ಟ್ ಗೆ ‘ವಿಕ್ರಂ’ಗಿಂತಲೂ ಹೆಚ್ಚು ರೇಟಿಂಗ್ ಸಿಕ್ಕಿದೆ..