Kiccha Sudeep : ಅಭಿನಯ ಚಕ್ರವರ್ತಿಗೆ ಈ ನಟಿಯ ಜೊತೆಗೆ ನಟಿಸುವಾಸೆಯಂತೆ…!!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಸ್ಟಾರ್ ನಟ…
ಕೇವಲ ಕನ್ನಡ ಅಷ್ಟೇ ಅಲ್ಲ ಅವರ ಕ್ರೇಜ್ ಬಹುಭಾಷೆಗಳಲ್ಲೂ ಇದೆ.. ಪರ ಭಾಷೆಗಳಲ್ಲೂ ಕಿಚ್ಚನಿಗೆ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ..
ಈಗ ಇರಬಹುದು , ಪೂಂಕ್ , ಬಾಹುಬಲಿ ಹೀಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಿಚ್ಚ ನಟಿಸಿ ಸೈ ಎನಿಸಿಕೊಂಡಿದ್ದು ಈಗಾಗಲೇ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ..
ಇತ್ತೀಚೆಗೆ ಅವರ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಮೂಲಕ ಅವರ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ..
ಅಂದ್ಹಾಗೆ ಕಿಚ್ಚ ಸುದೀಪ್ ಅವರಿಗೆ ಬಾಲಿವುಡ್ ನ ಸ್ಟಾರ್ ನಟಿಯೊಬ್ಬರ ಜೊತೆಗೆ ನಟಿಸುವ ಆಸೆಯಿದ್ಯಂತೆ..
ಆದರೆ, ಕೆಲವು ಷರತ್ತುಗಳನ್ನೂ ಅವರು ಹಾಕಿದ್ದಾರೆ. ಕಾಜೊಲ್ ಪತಿ, ಬಾಲಿವುಡ್ ನಟ ಅಜಯ್ ದೇವಗನ್ ಈ ವಿಷಯದಲ್ಲಿ ತಮ್ಮನ್ನು ದ್ವೇಷಿಸಬಾರದು ಎಂದು ತಮಾಷೆ ಮಾಡಿದ್ದಾರೆ.
ಅಷ್ಟಕ್ಕೂ ಕಿಚ್ಚ ಸುದೀಪ್ ಅವರಿಗೆ ನಟಿ ಕಾಜೊಲ್ ದೇವಗನ್ ಜೊತೆಗೆ ನಟಿಸುವ ಆಸೆಯಿದ್ಯಂತೆ..
ಅಲ್ಲದೇ ಅಜಯ್ ದೇವಗನ್ ತಮ್ಮಿಷ್ಟದ ನಟ ಎಂದೂ ಸಹ ಕಿಚ್ಚ ಹೇಳಿಕೊಂಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ವಿಚಾರವನ್ನ ಸುದೀಪ್ ಹಂಚಿಕೊಂಡಿದ್ದಾರೆ…
ನಾನು ನಟಿ ಕಾಜೊಲ್ ಜೊತೆ ನಟಿಸಲು ಕಾಯುತ್ತಿದ್ದೇನೆ. ಅಂಥದ್ದೊಂದು ಅವಕಾಶ ಸಿಗಲಿ. ಅವಕಾಶ ಸಿಕ್ಕಾಗಿ ಅಜಯ್ ದೇವಗನ್ ಕೋಪಿಸಿಕೊಳ್ಳದಿರಲಿ ಎಂದು ತಮಾಷೆ ಮಾಡಿದ್ದಾರೆ.
ಅಂದ್ಹಾಗೆ ಈ ಹಿಂದೆ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ನಡುವೆ ಭಾಷಾ ವಿಚಾರಕ್ಕೆ ಕೊಂಚ ತಕರಾರಾಗಿತ್ತಾದ್ರೂ ಇದೀಗ ಎಲ್ಲವೂ ಸರಿಯಿದೆ ಎಂದು ಸುದೀಪ್ ತಿಳಿಸಿದ್ದಾರೆ..
Kiccha Sudeep wish to Act with this bollywood Actress